Tuesday, October 26, 2021

ಈ ಹಳ್ಳಿಯಲ್ಲಿ ರೈತರ ವಾರ್ಷಿಕ ಆದಾಯವೆ 80 ಲಕ್ಷ.

Must read

ಭಾರತ ಪರಂಪರಾಗತವಾಗಿ ಹಳ್ಳಿಗಳ ದೇಶ..ಕೃಷಿಯೆ ನಮ್ಮಲ್ಲಿ ಬಹುಜನರ ಬದುಕಿಗೆ ಆಧಾರಸ್ತಂಭ..ಹೀಗಿದ್ದರೂ ಸ್ವಾತಂತ್ರ ನಂತರ ಯಾವ ಸರ್ಕಾರಗಳೂ ಹಳ್ಳಿ ಜನರ ಆರ್ಥಿಕತೆ ಬಗ್ಗೆ ಗಮನ ಕೊಡಲಿಲ್ಲ..21 ನೇ ಶತಮಾನದಲ್ಲಿ ಕೂಡ ಹಳ್ಳಿಗಳ ಸ್ಥಿತಿ ದಯನೀಯವಾಗಿದೆ ..ಅನೇಕ ಚುಣಾವಣೆ ಬಂದು ಜನಪ್ರತಿನಿಧಿಗಳು ಬದಲಾದರು ನಮ್ಮ ಹಳ್ಳಿಯ ಜೀವನಶೈಲಿ ಬದಲಾಗಲೇ ಇಲ್ಲ.. ಸರಳ ಜೀವನ ಕನಿಷ್ಟ ಖರ್ಚು ಸರಿ ಆದರೆ ಇನ್ನೊಂದು ಕಡೆ ನೋಡಿದಾಗ ತುಂಬ ಕಷ್ಟ.. ನಮ್ಮ ರೈತರ ಆಹಾರ ಉತ್ಪನ್ನಗಳಿಗೆ ಹಳ್ಳಿಯಲ್ಲಿ ಬೆಲೆ ಇಲ್ಲಾ..ಆದರೆ ಹುವಾಜಿ ಎಂಬ ಹಳ್ಳಿಯ ಜನರು ಕೃಷಿಯನ್ನೆ ಮಾಡಿ ಆರ್ಥಿಕವಾಗಿ ಅಭಿವೃದ್ಧಿಯಾಗಿ ಅದರ ಜೊತೆ ತಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸಿದ್ದಾರೆ..ಸಾಮಾನ್ಯವಾಗಿ ಹಳ್ಳಿ ಎಂದರೆ ಥಟ್ ಅಂಥ ನೆನಪಿಗೆ ಬರುವ ಚಿತ್ರಣ ಅಂದರೆ ಸಣ್ಣ ಮನೆಗಳು,ಹೊಲ,ಗದ್ದೆ,ಹಸು,ಕುರಿಗಳು ಆದರೆ ಈ ಹಳ್ಳಿ ಸಿಕ್ಕಾಪಟ್ಟೆ ಡಿಫ್ರೆಂಟ್…
ಈ ಹಳ್ಳಿ ದೊಡ್ಡ ದೊಡ್ಡ ಪಟ್ಟಣಗಿಂತಲು ತುಂಬಾ ದೊಡ್ಡದಾಗಿದೆ ನಗರದ ಪಟ್ಟಣಗಳಲ್ಲಿಯೂ ಇಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿರುವುದಿಲ್ಲ ಮತ್ತು ಇಲ್ಲಿಯ ಜನರ ಆದಾಯ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತಿರ ..80 ಲಕ್ಷ ಎಂದು ಅಂದಾಜಿಸಲಾಗಿದೆ..ಚೀನಾದ ಜಿಯಾಂಗಿನ್ ನಗರದ ಹತ್ತಿರ ಇರುವ ಹುವಾಜಿ ಗ್ರಾಮದಲ್ಲಿ ವಾಸಿಸುವ ಜನರ ಜೀವನಶೈಲಿಯೇ ಅದ್ಭುತ, ದೊಡ್ಡ ದೊಡ್ಡ ಬಂಗಲೆ,ಐಷರಾಮಿ ಕಾರುಗಳು,ಉತ್ತಮ ಶಿಕ್ಷಣ ಎಲ್ಲ ಸೌಲಭ್ಯಗಳನ್ನು ಹೊಂದಿದೆ..ಇದು ಚೀನಾದ ಅತ್ಯಂತ ಶ್ರೀಮಂತ ಕೃಷಿ ಗ್ರಾಮವಾಗಿದೆ ಅಲ್ಲಿಯ ಜನರು ಸಾಮಾನ್ಯ ರೈತರಂತೆ ಕೃಷಿ ಮಾಡುತ್ತಾರೆ.. ಇಲ್ಲಿ ವಾಸಿಸುವ ಜನರ ಆದಾಯ ಒಂದು ಲಕ್ಷ ಯೂರೋಗಳು ಅಂದರೆ ಭಾರತೀಯ ಕರೆನ್ಸಿ ಪ್ರಕಾರ 80 ಲಕ್ಷ ರೂಪಾಯಿಗಳು..
ಈ ಗ್ರಾಮವನ್ನು1961 ರಲ್ಲಿ ಸ್ಥಾಪಿಸಿದಾಗ ಈ ಹಳ್ಳಿಯ ಕೃಷಿಯ ಸ್ಥಿತಿ ತುಂಬಾ ಕೆಟ್ಟದಾಗಿತ್ತು, ಆದರೆ ಹಳ್ಳಿಯ ಕಮ್ಯುನಿಸ್ಟ್ ಪಕ್ಷದ ಸಮಿತಿ ಮಾಜಿ ಅಧ್ಯಕ್ಷ ರೆಸ್ವಾವೋ ಈ ಹಳ್ಳಿಯ ಸ್ಥಿತಿಯನ್ನು ಬದಲಾಯಿಸಿದರು.. ಸಾಮೂಹಿಕ ಕೃಷಿ ವ್ಯವಸ್ಥೆಯ ನಿಯಮಗಳನ್ನ ಮಾಡಲಾಯಿತು ನಂತರದ ದಿನಗಳಲ್ಲಿ ಅಲ್ಲಿನ ಜನರ ಜೀವನವೆ ಬದಲಾಯಿತು..ನಮ್ಮ ಭಾರತ ದೇಶದಲ್ಲಿ ಜನಪ್ರತಿನಿಧಿಗಳು ಮನಸ್ಸು ಮಾಡಿ ನಮ್ಮ ರೈತರ ಬೆಂಬಲವಾಗಿ ನಿಂತು ವ್ಯವಸ್ಥೆಯನ್ನು ಬದಲಾಯಿಸಿದರೆ ನಮ್ಮ ದೇಶದ ಹಳ್ಳಿಗಳು ಕೂಡ ಆರ್ಥಿಕವಾಗಿ ಮುಂದುವರಿಯಬಹುದು…

Also read:  ರಷ್ಯಾದಿಂದ ಬಾಹ್ಯಾಕಾಶದಲ್ಲಿ ವಿಶ್ವದ ಮೊದಲ ಸಿನಿಮಾ ಚಿತ್ರೀಕರಣ..!

More articles

Latest article