Monday, November 29, 2021

ಬುರ್ಝ್ ಖಲಿಫಾದಲ್ಲಿ ತೆಲಂಗಾಣ ಹಬ್ಬ ನೋಡಿ ಸಂಭ್ರಮಿಸಿದ ಜನ

Must read

ತೆಲಂಗಾಣ ಜನರು ಆಚರಿಸುವ ಸಾಂಪ್ರದಾಯಿಕ ಹಬ್ಬ ಅಂದರೆ ಅದು ಬತುಕಮ್ಮ(ಹೂವಿನ ಹಬ್ಬ). ಮಹಿಳೆಯರು ಮಾತ್ರವೇ ಸೇರಿ ಆಚರಣೆ ಮಾಡುವ ಹಬ್ಬ ಇದು. ಈ ಬಾರಿ ದುಬೈನ ಬುರ್ಜ್ ಖಲೀಫಾದಲ್ಲಿ ವಿಶ್ವದ ಅತಿದೊಡ್ಡ ಪರದೆಯಲ್ಲಿ ಇದನ್ನು ಪ್ರದರ್ಶಿಸಲಾಯಿತು. ಟಿ ಆರ್ ಎಸ್ ಪಕ್ಷದ ಎಂ ಎಲ್ಸಿ ಕೆ.ಕವಿತಾ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಸ್ಥೆ’ ತೆಲಂಗಾಣ ಜಾಗೃತಿ’ ಈ ವ್ಯವಸ್ಥೆಯನ್ನು ದೊಡ್ಡ ಪರದೆಯಲ್ಲಿ ಮಾಡಿದರು. ಇದನ್ನು ನೋಡಿದ ಅಲ್ಲಿನ ಸ್ಥಳಿಯರಿಗೆ ಸಾಕಷ್ಟು ಸಂತೋಷ ತಂದಿದೆ. ನಮ್ಮ ಊರಿನ ಹಬ್ಬದ ಈ ಸಂಪ್ರದಾಯ ವನ್ನು ದೊಡ್ಡ ಪರದೆಯಲ್ಲಿ ನೋಡುವುದೆ ಒಂದು ಸಂಭ್ರಮ ಮತ್ತು ದುಬೈ ಜನಗಳಿಗೆ ನಮ್ಮ ಹಬ್ಬದ ಒಂದು ಪರಿಚಯವಾಗಲಿದೆ ಎಂದು ಋಷಿ ವ್ಯಕ್ತ ಪಡಿಸಿದ್ದಾರೆ. ಈ ಪ್ರದರ್ಶನವು ಪ್ರಪಂಚದಾದ್ಯಂತ ವಿವಿಧ ವೇದಿಕೆಗಳಲ್ಲಿ ನೇರ ಪ್ರಸಾರವಾಯಿತು. ಈ ಪ್ರದರ್ಶನ ದಲ್ಲಿ ಭಾರತದ ನಕ್ಷೆ,ತೆಲಂಗಾಣದ ನಕ್ಷೆ ಅದರ ಜೊತೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್,ಬತ್ತುಕಮ್ಮ ಹೂವುಗಳು, ಅಲ್ಲಿಪೂಲಾ ವೆನ್ನೆಲಾ’ ,ಭಾರತದ ಪರಂಪರೆ ಮತ್ತು ತೆಲಂಗಾಣದ ಪರಂಪರೆಯನ್ನು ಬುರ್ಜ್‌ ಖಲೀಫಾ ದಲ್ಲಿ ಪ್ರದರ್ಶನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕವಿತಾ , ಯುಎಇ ಮತ್ತು ಭಾರತದ ಗಣ್ಯರೊಂದಿಗೆ ಭಾಗವಹಿಸಿದ್ದರು, ಅವರು ಈ ಪ್ರದರ್ಶನ ದಲ್ಲಿ ಭಾಗಿಯಾಗಿ ನೋಡಿ ಕಣ್ಣುತುಂಬಿಕೊಂಡರು. ಈ ವರ್ಷ ಒಂಬತ್ತು ದಿನಗಳ ಸುದೀರ್ಘ ಹಬ್ಬವನ್ನ ಅಂದರೆ ಅಕ್ಟೋಬರ್6 ರಿಂದ14 ರವರಿಗೆ ಆಚರಿಸಲಾಯಿತು. ಕವಿತಾ ಅವರ ನೇತೃತ್ವದಲ್ಲಿ ತೆಲಂಗಾಣ ಜಾಗೃತಿ ಮತ್ತು ತೆಲಂಗಾಣದ ಸ್ಪೂರ್ತಿಯನ್ನು ರಾಷ್ಟ್ರೀಯವಾಗಿ ಮತ್ತು ಜಾಗತಿಕ ವಾಗಿ ಸಶಕ್ತಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Latest article