Monday, November 29, 2021

ಹಾಟ್ ಡಾಗ್ ತಿಂದು ಸತ್ತ ವಿದ್ಯಾರ್ಥಿನಿ

Must read

ಅಮೇರಿಕಾದಲ್ಲಿ 20 ವರ್ಷದ ವಿಧ್ಯಾರ್ಥಿನಿಯೊಬ್ಬಳು ಹಾಟ್ ಡಾಗ್ ತಿಂದು ಮೃತಪಟ್ಟಿರುವ ಘಟನೆ ನಡೆದಿದೆ ಅಸಲಿಗೆ ಅದೊಂದು ಮನರಂಜನೆಗಾಗಿ ಏರ್ಪಡಿಸಲಾಗಿದ್ದ ಹಾಟ್ ಡಾಗ್ ತಿನ್ನುವ ಸ್ಪರ್ಧೆ, ಈ ಸ್ಪರ್ಧೆಯಲ್ಲಿ ಕಾಲೇಜು ವಿಧ್ಯಾರ್ಥಿನಿ ಪಾಲ್ಗೊಂಡಿದ್ದಳು ಗೆಲ್ಲುವ ಭರದಲ್ಲಿ ವೇಗವಾಗಿ ಹಾಟ್ ಡಾಗ್ ತಿನ್ನಲು ಆರಂಭಿಸಿದ ಯುವತಿಗೆ ಆಹಾರ ಗಂಟಲಿನಲ್ಲಿ ಸಿಲುಕಿತ್ತು , ಉಸಿರಾಡಲೂ ಕಷ್ಟ ಪಡುತ್ತಿದ್ದ ಯುವತಿಯನ್ನು ತಕ್ಷಣವೇ ಬೋಸ್ಟನ್ ಆಸ್ಪತ್ರೆಗೆ ದಾಖಲಿಸಲಾಯ್ತು ಆದ್ರೆ ವೈದ್ಯರ ಪ್ರಯತ್ನಗಳೆಲ್ಲಾ ವ್ಯರ್ಥವಾಗಿ ವಿದ್ಯಾರ್ಥಿನಿ ಉಸಿರು ಚೆಲ್ಲಿದ್ದಾಳೆ.

ಈ ಸ್ಪರ್ಧೆಯನ್ನು ಟಫ್ಟ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಹುಡುಗಿ ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ವರದಿಯ ಪ್ರಕಾರ ಈ 20 ವರ್ಷದ ಹುಡುಗಿಯ ಹೆಸರು ಮೆಡೆಲಿನ್ ‘ಮ್ಯಾಡಿ’ ನಿಕ್ಪಾನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಮೆಡೆಲಿನ್ ​​ಬಹಳ ಪ್ರತಿಭಾವಂತ ವಿದ್ಯಾರ್ಥಿನಿ ಮತ್ತು ಶ್ರೇಷ್ಠ ಕ್ರೀಡಾಪಟುವಾಗಿದ್ದಳು , ​​ಬಯೋಪ್ಸೈಕಾಲಜಿಯ ವಿದ್ಯಾರ್ಥಿಯಾಗಿದ್ದಳು ಹಾಗು ಲ್ಯಾಕ್ರೋಸ್ ತಂಡದ ಸದಸ್ಯರಾಗಿದ್ದಳು.

ಮತ್ತೊಂದೆಡೆ ಮೆಡಲಿನ್ ಸ್ನೇಹಿತರು ಆಕೆಯ ಕುಟುಂಬಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದಾರೆ. ನಿಧಿಯನ್ನು ಸಂಗ್ರಹಿಸಿದ ನಂತರ, ಅದನ್ನು ಮೇಡ್ಲೈನ್ ​​ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮೃತ ಮೆಡಲಿನ್ಗೆ ಸಂತಾಪ ಸೂಚಿಸಲಾಗುತ್ತಿದೆ, ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿರುವ ನೋವು ನಮ್ಮನ್ನು ಕಾಡುತ್ತಿದೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿಗಳು ನೋವು ತೋಡಿಕೊಂಡಿದ್ದಾರೆ.

Latest article