Wednesday, June 29, 2022

ಶ್ರೀಲಂಕಾ ಆರ್ಥಿಕ ಸ್ಥಿತಿ ಸುಧಾರಣೆಗೆ ವಿಮಾನಯಾನ ಸಂಸ್ಥೆಗಳ ಮಾರಾಟ..!

Must read

ಶ್ರೀಲಂಕಾದ ಹೊಸ ಸರ್ಕಾರವು ದೇಶದ ಆರ್ಥಿಕ ದುಸ್ಥಿತಿಯನ್ನು ಸರಿದೂಗಿಸಲು ಸಾರ್ವಜನಿಕ ವಿಮಾನಯಾನ ಸಂಸ್ಥೆಗಳನ್ನು ಮಾರಾಟ ಮಾಡಲು ಯೋಜಿಸಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ಹೊಸಾ ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಸರ್ಕಾರಿ ನೌಕರರಿಗೆ ವೇತನ ಪಾವತಿಸಲು ಅಧಿಕಾರಿಗಳಿಗೆ ಹೊಸ ನೋಟುಗಳನ್ನು ಮುದ್ರಿಸಲು ಒತ್ತಾಯಿಸಲಾಗಿದೆ. ಶ್ರೀಲಂಕಾದ ಹೊಸ ಆಡಳಿತವು ಶ್ರೀಲಂಕಾದ ವಿಮಾನಯಾನ ಸಂಸ್ಥೆಯನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಯೋಜಿಸಿದೆ. ಮಾರ್ಚ್ 2021ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಶ್ರೀಲಂಕಾದ ವಿಮಾನಯಾನ ಸಂಸ್ಥೆ 45 ಬಿಲಿಯನ್ ರೂಪಾಯಿ 124 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.

ಶ್ರೀಲಂಕಾ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ದೇಶವು ವಿದೇಶಿ ಸಾಲದ ವಿಷಯದಲ್ಲಿ ಸುಸ್ತಿದಾರನಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ವಿಮಾನದಲ್ಲಿ ಎಂದಿಗೂ ಕಾಲಿಡದವರು ಈ ನಷ್ಟದ ಹೊರೆಯನ್ನು ಹೊರಬಾರದು ಹಾಗಾಗಿ ವಿಮಾನಯಾನ ಸಂಸ್ಥೆಗಳನ್ನ ಖಾಸಗೀಕರಣ ಗೊಳಿಸಿರುವುದಾಗಿ ಅವರು ಹೇಳಿದರು.

ಸಂಬಳ ಪಾವತಿಸಲು ಹೆಚ್ಚುವರಿ ನೋಟುಗಳನ್ನು ಮುದ್ರಿಸಲು ಒತ್ತಾಯಿಸಲಾಗುತ್ತಿದೆ. ಇದು ದೇಶದ ಕರೆನ್ಸಿಯ ಮೇಲೆ ಮತ್ತಷ್ಟು ಹೊರೆಯಾಗಲಿದೆ. ಶ್ರೀಲಂಕಾದಲ್ಲಿ ಕೇವಲ ಒಂದು ದಿನದ ಪೆಟ್ರೋಲ್ ಮಾತ್ರ ಉಳಿದಿದೆ, ಜೊತೆಗೆ ಈಗ ಶ್ರೀಲಂಕಾದ ಕರಾವಳಿಯನ್ನು ತಲುಪಿರುವ ಕಚ್ಚಾ ತೈಲ ಮತ್ತು ಸೀಮೆಎಣ್ಣೆಯ ಮೂರು ಹಡಗುಗಳಿಗೆ ಪಾವತಿಸಲು ಮುಕ್ತ ಮಾರುಕಟ್ಟೆಯಲ್ಲಿ ಡಾಲರ್ ಸಂಗ್ರಹಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಶ್ರೀಲಂಕಾದ ಸದ್ಯದ ಪರಿಸ್ಥಿತಿ ಬಿಚ್ಚಿಟ್ಟರು.

Latest article