Monday, November 29, 2021

ಭಾರತದ ಬಳಿ ತೈಲ ಖರೀದಿಗೆ ಸಾಲ ಕೇಳಿದೆ ಶ್ರೀಲಂಕಾ!

Must read

3,749 ಕೋಟಿ ರೂ ಸಾಲದ ನೆರವನ್ನು ಶ್ರೀಲಂಕಾ ಕೇಳಿದೆ ಇಂಧನ ಅಭಾವವನ್ನು ಎದುರಿಸುತ್ತಿರುವ ಶ್ರೀಲಂಕಾ ತೈಲ ಪೂರೈಕೆ ಸ್ಥಗಿತ ತಡೆಗಟ್ಟಲು ಭಾರತದ ಬಳಿ 3,749 ಕೋಟಿ ರೂ ಸಾಲ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಈ ಬಗ್ಗೆ ಭಾರತ ಸರ್ಕಾರ ದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಶ್ರೀಲಂಕಾ ತಿಳಿಸಿದೆ.. ಮುಂದಿನ ವರ್ಷ ಜನವರಿಯ ತನಕ ಶ್ರೀಲಂಕಾಗೆ ತೈಲ ಪೂರೈಕೆ ನಡೆಯಲಿದೆ. ಜನವರಿ ನಂತರ ತೈಲ ಪೂರೈಕೆ ಎಂದಿನಂತೆ ನಡೆಯಬೇಕೆಂದರೆ ಓಮನ್ ಗೆ ಇಂಧನ ಶುಲ್ಕ ಪಾವತಿಸಬೇಕಿದೆ. ಈಗಾಗಲೇ ಅರ್ಥಿಕ ಸಂಕಷ್ಟದಲ್ಲಿರುವ ದೇಶ ಇಂಧನ ಶುಲ್ಕ ಭರಿಸಲು ಅಶಕ್ತವಾಗಿದೆ. ಹೀಗಾಗಿ ನಾವು ಭಾರತದ ನೆರವು ಕೋರಿದ್ದೇವೆ ಎಂದು ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಹೇಳಿದ್ದಾರೆ. ಭಾರತದ ಇಂಡೀಯನ್ ಆಯಿಲ್ ಸಂಸ್ಥೆಯ ಅಧೀನದಲ್ಲಿರುವ ಅಲ್ಲಿನ ಲಂಕಾ ಐಒಸಿ 1 ಲೀ.ಪೆಟ್ರೋಲ್ ಹಾಗೂ ಡೀಸಲ್ ಬೆಲೆಯನ್ನು 5ರೂ ಏರಿಸಿತ್ತು ಸರ್ಕಾರಿ ಸ್ವಾಮ್ಯದ ಪೆಟ್ರೊಲಿಯಂ ಸಂಸ್ಥೆ ಮುಂದಿನ ದಿನಗಳಲ್ಲಿ ತೈಲ ದರ ಏರಿಸಲು ಚಿಂತನೆ ನಡೆಸಿದೆ.

Latest article