Thursday, January 27, 2022

ದಕ್ಷಿಣ ಕೊರಿಯಾ ಚುನಾವಣೆ ಪ್ರಚಾರದಲ್ಲಿ ಕೂದಲ ಚಿಕಿತ್ಸೆ ಬರಿಸುವ ಭರವಸೆ ನೀಡಿ ಮತಸೆಳೆತ ..

Must read

ದಕ್ಷಿಣ ಕೊರಿಯಾ : ನಮ್ಮ ದೇಶದಲ್ಲಿ ಚುನಾವಣೆ ನಡೆದ್ರೆ ನಮ್ಮ ಜನಪ್ರತಿನಿಧಿಗಳು ದೊಡ್ಡ ಭರವಸೆಯ ಪಟ್ಟಿ ನೀಡುತ್ತಾರೆ .ಲ್ಯಾಪಟಾಪ್ ,ಮೊಬೈಲ್ ಮತ್ತು ಉಚಿತ ನೀರು ಮಧ್ಯ ಹಣ ಎಂದು ಹೇಳುತ್ತಾರೆ.
ಆದರೆ, ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಇಲ್ಲಿನ ಅಭ್ಯರ್ಥಿ ನೀಡಿರುವ ಭರವಸೆಯನ್ನ ಕೇಳಿದ್ರೆ ಶಾಕ್ ಆಗುತ್ತಿರ .ಕೂದಲು ಉದುರುವ ಸಮಸ್ಯೆ ಯಾರಿಗೆಲ್ಲಾ ಇದೆ ಈ ಭರವಸೆ ಅವರನ್ನ ಆಕರ್ಷಿಸಿದೆ. ದಕ್ಷಿಣ ಕೊರಿಯಾದಲ್ಲಿ ಐದು ಮಂದಿಯಲ್ಲಿ ಒಬ್ಬರಿಗೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೂದಲು ಉದುರುವ ಸಮಸ್ಯೆ ಇರುವವರು ಇವರ ಪರವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದ್ರೆ ಚಿಕಿತ್ಸೆಗೆ ಸಹಕಾರ ನೀಡುವ ಭರವಸೆಯನ್ನ ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಲೀ ಜೇ-ಮ್ಯುಂಗ್ ನೀಡಿದ್ದಾರೆ.ದಕ್ಷಿಣ ಕೊರಿಯಾದ ರಾಷ್ಟ್ರೀಯ ಆರೋಗ್ಯ ವಿಮಾ ಕಾರ್ಯಕ್ರಮದಲ್ಲಿ ಈ ಭರವಸೆಯನ್ನ ನೀಡಿದ್ದಾರೆ. ಯಾರಿಗೆಲ್ಲ ಕೂದಲು ಉದುರುವ ಸಮಸ್ಯೆ ಇದೆ ಅವರಿಗೆ ಹಣ ನೀಡುವ ಯೋಜನೆಯನ್ನೂ ಸೇರಿಸುವುದಾಗಿ ಲೀ ಜೆ-ಮ್ಯುಂಗ್ ಘೋಷಣೆ ಮಾಡಿದ್ದಾರೆ.

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಉತ್ತಮ ಪ್ರತಿಕ್ರೆಯೆ ವ್ಯಕ್ತವಾಗಿದೆ. ವರದಿಯ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ಐದು ಮಂದಿಯಲ್ಲಿ ಒಬ್ಬರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.ಈ ಯೋಜನೆ ಸಾಕಷ್ಟು ಮಂದಿ ಕೂದಲು ಉದುರುವ ಸಮಸ್ಯೆ ಇರುವವರ ಸಂತಸಕ್ಕೆ ಕಾರಣವಾಗಿದೆ.

Latest article