Sunday, October 2, 2022

ದುಬೈನಲ್ಲಿ ಮಂತ್ರಾಲಯದ ರೀತಿಯಲ್ಲಿಯೇ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನೆ

Must read

IMG_0308


ಅರಬ್ ರಾಷ್ಟ್ರದಲ್ಲಿ ನೆಲೆಸಿರುವ ರಾಘವೇಂದ್ರ ಸ್ವಾಮಿಗಳ ಭಕ್ತರಿಂದ ಮಂತ್ರಾಲಯದಲ್ಲಿ ನಡೆಯುವಂತಹ ಆರಾಧನೆಯ ರೀತಿಯಲ್ಲಿ ಶ್ರೀಗುರು ರಾಯರ ಆರಾಧನೆಯನ್ನು ಮಾಡಬಯಸುವವರು ಶ್ರೀಯುತ ವಿಜಯ್, ಶ್ರೀಯುತ ಸದನ್ ದಾಸ್ ಹಾಗೂ ಶ್ರೀಯುತ ಮಧು. ಇವರುಗಳ ಪರಿಶ್ರಮದ ಹಾಗೂ ರಾಯರ ಆಶೀರ್ವಾದದ ಪರವಾಗಿ 14 ನೇ ಆಗಸ್ಟ್, ಭಾನುವಾರ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

 

 

ಎಲ್ಲಿ ನಿನ್ನ ಭಕ್ತರೋ ಅಲ್ಲೆ ಮಂತ್ರಾಲಯ …..

ಅರಬ್ ರಾಷ್ಟ್ರದ ಜನತೆಗೆ ಇದು ನಿಜವಾಗಿ ಆದಂತಹ ಅನುಭವ …..

ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವವು ಮೊದಲ ಬಾರಿ ಯುಎಇ ನಲ್ಲಿ ನಡೆದರೂ, ಇದು ಮೊದಲನೇ ಬಾರಿ ಎಂದು ಎಲ್ಲೂ, ಯಾರಿಗೂ ಅನ್ನಿಸಲಿಲ್ಲ, ಕಾರಣ ರಾಯರ ಹಾಗೂ ಎಲ್ಲಾ ದೇವರುಗಳ ಆಶೀರ್ವಾದ ಫಲದಿಂದಾಗಿ ಸರ್ವರೀತಿಯಲ್ಲೂ ಸರ್ವ ಸೇವೆಗಳು, ಸರ್ವ ವಿಧದ ಪೂಜೆಗಳು ನಿರ್ವಿಘ್ನವಾಗಿ ನಡೆದವು.

IMG_0307
ಮಂತ್ರಾಲಯದ ಬೃಂದಾವನದ ರೀತಿಯ ಬೃಂದಾವನ ಪ್ರತಿಕೃತಿ ಅರಬ್ ರಾಷ್ಟ್ರದಲ್ಲಿ ಮೂಡಿಬಂದ ಕಾರಣ, ಗುರು ರಾಘವೇಂದ್ರ ಸ್ವಾಮಿಗಳ ಭಕ್ತರ ಪಾಲಿಗೆ ಇದು ವಿಸ್ಮಯವಾಗಿ ಕಂಡಿದ್ದಲ್ಲದೆ ಅವರೆಲ್ಲರ ಕಣ್ಣಲ್ಲಿ ಆನಂದಬಾಷ್ಪ ಸುರಿಸಿದ ಅಪೂರ್ವ ಸಂಗಮವಾಗಿತ್ತು. ಎಲ್ಲರೂ ತಮ್ಮನ್ನು ತಾವು ಮಂತ್ರಾಲಯದಲ್ಲೇ, ಬೃಂದಾವನದ ಎದುರಿಗೆ ನಿಂತಿರುವಂತೆ ಭಾವಿಸಿದರು.

ಪವಿತ್ರ ತುಂಗಭದ್ರ ನದಿ, ಅದರ ಎದುರಿಗೆ ಬೃಂದಾವನ ಎಲ್ಲರನ್ನು ಭಕ್ತಿ ಲೋಕದಲ್ಲಿ ಮುಳುಗಿಸಿ ಬಿಟ್ಟಿತು.

ರಾಯರ ಮಠದ ರೀತಿಯಲ್ಲಿಯೇ ಎಲ್ಲ ಧಾರ್ಮಿಕ ಪೂಜೆ ವಿಧಿ ವಿಧಾನಗಳು, ಭಕ್ತಿ ಗಾಯನ, ನೃತ್ಯ ಅದ್ಧೂರಿಯಾಗಿ ನಡೆಯಿತು. ಇದರ ಜೊತೆಗೆ ರಾಯರ ಭಕ್ತರಿಂದ
ಪಂಚಾಮೃತ ಅಭಿಷೇಕ, ಕನಕಾಭಿಷೇಕ, ದ್ರವ್ಯಭಿಷೇಕ, ತುಳಸಿ ಅರ್ಚನೆ, ಅಷ್ಟೋತ್ತರ ಪಠಣ, ಅಲಂಕಾರ ಬ್ರಾಹ್ಮಣ ಸೇವೆ, ವಸ್ತ್ರ ಸಮರ್ಪಣೆ ಸೇವೆ, ಸಂಕಲ್ಪ ಸೇವೆಗಳು, ಪಲ್ಲಕ್ಕಿ ಸೇವೆ, ರಥೋತ್ಸವ, ಉಯ್ಯಾಲೆ ಸೇವೆ ನಡೆದವು.

ಮಹಾಮಂಗಳಾರತಿಯ ನಂತರ ಎಲ್ಲಾ ನೆರೆದಿದ್ದ ಭಕ್ತರಿಗೆ, ಮಂತ್ರಾಲಯದ ಪರಿಮಳ ಪ್ರಸಾದ, ಮಂತ್ರಾಲಯದ ಮಂತ್ರಾಕ್ಷತೆ ಜೊತೆಗೆ ಪ್ರಸಾದ ನೀಡಲಾಯಿತು.

Also read:  ಪರಮಾಣು ಜಲಾಂತರ್ಗಾಮಿ ನೌಕೆ ನಿರ್ಮಾಣದ ಒಡಂಬಡಿಕೆ: ಚೀನಾಕ್ಕೆ ಆಸ್ಟ್ರೇಲಿಯಾ ತಿರುಗೇಟು

ಇಷ್ಟು ಅದ್ದೂರಿಯಿಂದ ಹಾಗೂ ವಿಜೃಂಭಣೆಯಿಂದ ಕಾರ್ಯಕ್ರಮಕ್ಕೆ ರೂವಾರಿಗಳಾಗಿದ್ದು ಮಠದ ವತಿಯಿಂದ ಬಂದಂತಹ ಶ್ರೀ ದತ್ತಾತ್ರೆಯ ಗುರುಗಳು ಹಾಗೂ ಅವರ ಶಿಷ್ಯ ವೃಂದದವರು.

ಇಂಥ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀಯುತ ಅರ್ಜುನ್ ಭಾರಧ್ವಾಜ್ ಅವರ ಪ್ರವಚನ ಹಾಗೂ ಅವರು ತಿಳಿಸಿ ಕೊಟ್ಟಂತಹ ಶ್ರೀ ಗುರುರಾಯರ ವಿಷಯಗಳು ಆರಾಧನೆ ಮಹೋತ್ಸವಕ್ಕೆ ಮೆರಗು ತಂದುಕೊಟ್ಟವು.

ಶ್ರೀ ರಾಘವೇಂದ್ರ ಸೇವಾ ಸಮಿತಿ, ಯುಎಇ ಇವರ ಕಡೆಯಿಂದ ಶ್ರೀ ದತ್ತಾತ್ರೆಯ ಗುರುಗಳಿಗೆ ಹಾಗೂ ಶ್ರೀಯುತ ಅರ್ಜುನ್ ಭರದ್ವಾಜ್ ರವರಿಗೆ “ಆಧ್ಯಾತ್ಮಿಕ ರತ್ನ” ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು.

ರಾಯರ ಭಕ್ತಾದಿಗಳು, ಇಂತಹ ಅದ್ಭುತವಾದ ಆರಾಧನಾ ಮಹೋತ್ಸವವನ್ನು ಅರಬ್ ರಾಷ್ಟ್ರದಲ್ಲಿ ಮಾಡುವುದಕ್ಕೆ ನಾಂದಿ ಹಾಡಿದ ಪ್ರತಿಯೊಬ್ಬರಿಗೂ ಅಭಿನಂದನೆಯನ್ನು ಸಲ್ಲಿಸಿದರು.

Also read:  ಅಫ್ಘನ್ ನ ಏಕೈಕ ಅಶ್ಲೀಲ‌ ಚಿತ್ರತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

ರಾಯರು, ಈ ಕಾರ್ಯಕ್ರಮಕ್ಕೆ ಬಂದಂತಹ ಪ್ರತಿ ಒಬ್ಬರಿಗೂ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರಿಗೂ ಯಶಸ್ಸು, ಆರೋಗ್ಯ, ಸಫಲತೆ ಉನ್ನತಿ, ಸದೃಢ ಉದ್ಯೋಗ, ಭಯ ನಿವಾರಣೆ, ಸ್ಥೈರ್ಯ, ಕುಟುಂಬದಲ್ಲಿ ಶಾಂತಿ ನೆಮ್ಮದಿ, ಸಾವು ನೋವು ಅನಾರೋಗ್ಯದಿಂದ ಎಲ್ಲರನ್ನೂ ಪಾರುಮಾಡಿ, ಸರ್ವ ರೀತಿಯಲ್ಲೂ ಸನ್ಮಂಗಳವನ್ನುಂಟು ಮಾಡಲಿ ಎಂದು ರಾಯರಲ್ಲಿ ಶ್ರೀ ರಾಘವೇಂದ್ರ ಸೇವಾ ಸಮಿತಿಯ ಪ್ರಮುಖರು ಪ್ರಾರ್ಥನೆಯನ್ನು ಸಲ್ಲಿಸಿದರು.

Latest article