Thursday, January 20, 2022

ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಬರುವ ಎಲ್ಲಾ ಪ್ರಯಾಣಿಕರಿಗೂ ಕ್ವಾರಂಟೀನ್​​ ಕಡ್ಡಾಯ..!

Must read

ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಕೊರೊನಾದ ಹೊಸ ರೂಪಾಂತರವು ಕಳವಳವನ್ನು ಹೆಚ್ಚಿಸಿರುವ ಸಮಯದಲ್ಲಿ. ದಕ್ಷಿಣ ಆಫ್ರಿಕಾ ವಲಯದಿಂದ ಪ್ರಯಾಣಿಸುವ ಪ್ರಯಾಣಿಕರಿಂದ ಸೋಂಕು ಜಗತ್ತಿನಾದ್ಯಂತ ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಪ್ರಪಂಚದಾದ್ಯಂತದ ಅನೇಕ ದೇಶಗಳು ಹೆದರುತ್ತಿವೆ. ದಕ್ಷಿಣ ಆಫ್ರಿಕಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸ್ ಇದುವರೆಗೆ ದೇಶದಲ್ಲಿ ಈ ರೂಪಾಂತರದ 22 ಪ್ರಕರಣಗಳು ಕಂಡುಬಂದಿವೆ. ವಿಜ್ಞಾನಿಗಳು ಇದನ್ನು ಬಿ.1.1.529 ಎಂದು ಹೆಸರಿಸಿದ್ದಾರೆ. ಇದು ಗಂಭೀರ ಕಾಳಜಿಯ ರೂಪಾಂತರ ಎಂದು ಡಬ್ಲುಎಚ್​ಒ ವಿವರಿಸಿದೆ.

ಹೀಗಾಗಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗುವ ಪ್ರತಿಯೊಬ್ಬ ವ್ಯಕ್ತಿಯನ್ನು ಮುಂಬೈಗೆ ಬಂದ ನಂತರ ಕ್ವಾರಂಟೈನ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಅವರ ಮಾದರಿಗಳನ್ನು ಜೀನೋಮ್ ಸಿಕ್ವೆನ್ಸಿಂಗ್​ ಅನುಕ್ರಮಕ್ಕಾಗಿ ಕಳುಹಿಸಲಾಗುವುದು. ಅಲ್ಲಿಯವರೆಗೆ ಕ್ವಾರಂಟೀನ್​ನಲ್ಲಿರ ಬೇಕಾಗುತ್ತದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಹಾನಿಯನ್ನು ಕೊರೊನಾ ಮಾಡಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕೊರೊನಾ ಹೊಸ ರೂಪಾಂತರದ ಕಾರಣದಿಂದಾಗಿ ಮುಂಜಾಗ್ರತೆಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಈ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶನಿವಾರ ಮಾಹಿತಿ ನೀಡಿದ್ದಾರೆ. ಇಂದು ಸಂಜೆ 5:30ಕ್ಕೆ ಬಿಎಂಸಿ ರಾಜ್ಯದ ಹಿರಿಯ ಅಧಿಕಾರಿಗಳ ಸಭೆಯನ್ನೂ ಕರೆಯಲಾಗಿದೆ. ಅಲ್ಲಿಂದ ಹಿಂದಿರುಗುವ ಪ್ರಯಾಣಿಕರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಗುಜರಾತ್‌ನಲ್ಲಿ ಕಡ್ಡಾಯಗೊಳಿಸಲಾಗಿದೆ.

Latest article