ಶುಕ್ರವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆ ಇದು. ಕಾರ್ಲ್ಸ್ಬಾದ್ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದ ಟ್ರಕ್ನ ಹಿಂಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿತು ಮತ್ತು ಅದರಲ್ಲಿ ಡಾಲರ್ಗಳು ತುಂಬಿದ ಚೀಲಗಳು ಗಾಳಿಯಲ್ಲಿ ತೂರಿ ಬರುತ್ತಿದ್ದವು. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಜನರು ತಮ್ಮ ಕಾರುಗಳನ್ನು ನಿಲ್ಲಿಸಿ ಡಾಲರ್ ಆರಿಸಿಕೊಳ್ಳಲು ಆರಂಭಿಸಿದರು. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಯಿತು.
ಟ್ರಕ್ ಸ್ಯಾನ್ ಡಿಯಾಗೋದ ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಶನ್ ಕಚೇರಿಗೆ ಹೋಗುತ್ತಿದ್ದಾಗ ಇಂಟರ್ಸ್ಟೇಟ್ ಹೈವೇ -5 ಕಾರ್ಲ್ಸ್ಬಾಡ್ನಲ್ಲಿ ಬೆಳಿಗ್ಗೆ 9:15 ರ ಸುಮಾರಿಗೆ ಘಟನೆ .ರಸ್ತೆಯಲ್ಲಿ ನೋಟುಗಳು ಹಾರಾಡುತ್ತಿರುವುದನ್ನು ಕಂಡು ಹಲವರು ಕಾರನ್ನು ನಿಲ್ಲಿಸಿ ದುಡ್ಡು ಆರಿಸಿಕೊಳ್ಳಲು ಆರಂಭಿಸಿದರು. ಈ ವೇಳೆ ಟ್ರಕ್ ಚಾಲಕ ಇದನ್ನು ವಿರೋಧಿಸಿದ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಎರಡೂ ಕಡೆಯಿಂದ ಹೆದ್ದಾರಿಯನ್ನು ಮುಚ್ಚಿದರು. ಜನರ ವಿಚಾರಣೆಗೆ ಪೊಲೀಸರು ಮುಂದಾದರು. ಸುಮಾರು ಎರಡು ಗಂಟೆಗಳ ಹೋರಾಟದ ಬಳಿಕ ರಸ್ತೆ ಸಂಚಾರಕ್ಕೆ ಚಾಲನೆ ದೊರೆಯಿತು.
ಬೀದಿಯಲ್ಲಿ ಡಾಲರ್ಗಳನ್ನು ನೋಡಿ ಜನ ಹುಚ್ಚರಂತೆ ಲಾಟರಿ ಹೊಡೆದಂತೆ ಖಷಿಯಾಗಿದ್ದರು.ಇವರಲ್ಲಿ ಹಲವರು ಡಾಲರ್ ಸಂಗ್ರಹಿಸುವುದರ ಜೊತೆಗೆ ವಿಡಿಯೋ ಮಾಡುತ್ತಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ವೈರಲ್ ಆಗುತ್ತಿದೆ.
ಈ ವೇಳೆ ಕೆಲವರು ಹಣ ವಾಪಸ್ ನೀಡಿದರೂ ಕೆಲವರು ಡಾಲರ್ ಸಮೇತ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾರೆ.ಈ ಹಣವನ್ನು ಪೊಲೀಸರಿಗೆ ಹಿಂತಿರುಗಿಸದಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜನರಿಗೆ ಪೊಲೀಸರು ಮನವಿ ಮಾಡಿದರು.