Tuesday, October 26, 2021

ಕೋವಿಡ್ -19 : ಎಫೆಕ್ಟ್ ಪೋಷಕರು ಎರಡನೇ ಮಗು ಪಡೆಯುವ ಬಗ್ಗೆ ಎರೆಡೆರಡು ಬಾರಿ ಯೋಚಿಸುತ್ತಿದ್ದಾರೆ …!

Must read

ಯಸ್, ಕೋವಿಡ್ 19 ಇಡೀ ಜಗತ್ತಿನ ಲೆಕ್ಕಾಚಾರಗಳನ್ನೆ ತಲೆಕೆಳಕಾಗುವಂತೆ ಮಾಡಿದೆ. ತಾಯಂದಿರು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಬಗ್ಗೆ ಎರಡು ಬಾರಿ ಯೋಚಿಸುತ್ತಿದ್ದಾರೆ .ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಮೀರಿ ಸಾಂಕ್ರಾಮಿಕದ ಪರಿಣಾಮಗಳಿಗೆ ಮತ್ತೊಂದು ಉದಾಹರಣೆಯಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ರೋಗ ಆರಂಭವಾಗುವ ಮುನ್ನ ಮತ್ತೆ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದ ನ್ಯೂಯಾರ್ಕ್ ನಗರದ ಅರ್ಧದಷ್ಟು ತಾಯಂದಿರು ಏಕಾಏಕಿ ಮೊದಲ ಕೆಲವು ತಿಂಗಳುಗಳಲ್ಲಿ ಕಡಿಮೆ ಆಗಿದ್ದಾರೆ ಎಂದು ಹೊಸ ಅಧ್ಯಯನವೊಂದು ತೋರಿಸಿದೆ. ಅಧ್ಯಯನದ ಟಿಪ್ಪಣಿಗಳನ್ನು ‘ಜಮಾ ನೆಟ್ವರ್ಕ್ ಓಪನ್’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ‘.
ಏಪ್ರಿಲ್ 2020 ರ ಮಧ್ಯದಲ್ಲಿ ಡೇಟಾ ಸಂಗ್ರಹಿಸಿದ ಸಮೀಕ್ಷೆಯಲ್ಲಿ, ತಾಯಂದಿರಿಗೆ ಸಾಂಕ್ರಾಮಿಕ
ರೋಗಕ್ಕೂ ಮೊದಲು ತಮ್ಮ ಗರ್ಭಧಾರಣೆಯ ಯೋಜನೆಗಳನ್ನು ತಿಳಿಸುವಂತೆ ಕೇಳಲಾಯಿತು ಹಾಗೂ ಸಮೀಕ್ಷೆಯ ಸಂದರ್ಭದಲ್ಲಿ ಅವರು ಇನ್ನೂ ತಮ್ಮ ಯೋಜನೆಗಳನ್ನು ಮುಂದುವರಿಸುತ್ತಾರೆಯೇ ಎಂದು ಕೇಳಲಾಯಿತು. ಸಂಶೋಧನೆಗಳ ಪೈಕಿ, ಗರ್ಭಿಣಿಯಾಗಲು ಸಧ್ಯಕ್ಕೆ ಅರ್ಧಕ್ಕಿಂತಲೂ ಹೆಚ್ಚು ತಾಯಂದಿರು ಮುಂದೂಡಿದ್ದಾರೆ ಎಂದು ತಿಳಿದುಬಂದಿದ್ದು ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ಮಗುವಿನ ಚಿಂತನೆ ಎನ್ನುತ್ತಿದ್ದಾರೆ. ತಮ್ಮ ಕುಟುಂಬಗಳನ್ನು ವಿಸ್ತರಿಸುವ ಯೋಜನೆಯನ್ನು ವಿಳಂಬ ಮಾಡುವ ಬದಲು ಅವರು ಸಂಪೂರ್ಣವಾಗಿ ಕೈಬಿಡಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಆರ್ಥಿಕವಾಗಿ ಸಾಕಷ್ಟು ಹೊಡೆತ ಬಿದ್ದಿದೆ. ಎಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ ಇಂತಹ ಸಂದರ್ಭದಲ್ಲಿ ಮಗುವಿನ ಆಲೋಚನೆ ಇಲ್ಲ ಅಂತಿದ್ದಾರೆ ಭಾರತೀಯ ಪೋಷಕರು ಕೂಡ.

More articles

Latest article