Friday, January 21, 2022

ಪಾಕಿಸ್ತಾನದ ಖೈಬರ್ ಪ್ರಂತ್ಯದಲ್ಲಿ ಭಾರೀ ಮಳೆಯಿಂದಾಗಿ 18 ಸಾವು ….!

Must read

ಪಾಕಿಸ್ತಾನದಲ್ಲಿ ಪ್ರಕೃತಿ ವಿಕೋಪದ ಘಟನೆಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಭಾರೀ ಮಳೆಯಿಂದಾಗಿ ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ 18 ಕ್ಕೆ ಏರಿದೆ. ಜನವರಿ 3 ರಿಂದ 10 ರವರೆಗಿನ ಮಳೆ ಮತ್ತು ಹಿಮಪಾತದ ಸಮಯದಲ್ಲಿ, ಪಾಕಿಸ್ತಾನದ ಕೆಪಿಯ ವಿವಿಧ ಭಾಗಗಳಲ್ಲಿ ಭೂಕುಸಿತಗಳು, ಛಾವಣಿ ಮತ್ತು ಗೋಡೆ ಕುಸಿತದ ಘಟನೆಗಳಲ್ಲಿ ಸುಮಾರು 46 ಜನರು ಗಾಯಗೊಂಡಿದ್ದಾರೆ .
ಪಾಕಿಸ್ತಾನದ ಕೆಪಿಯ ಚಾರ್ಸದ್ದಾ, ಕರಕ್, ಖೈಬರ್, ಮೊಹಮಂಡ್, ನೌಶೆರಾ ಮತ್ತು ಅಪ್ಪರ್ ದಿರ್ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಇದಕ್ಕೂ ಮೊದಲು, ಉತ್ತರ ಪಾಕಿಸ್ತಾನದಲ್ಲಿ ಭಾರೀ ಹಿಮಪಾತದಿಂದಾಗಿ ಕಾರುಗಳಲ್ಲಿ ಸಿಕ್ಕಿಹಾಕಿಕೊಂಡ 21 ಪ್ರವಾಸಿಗರು ಸಾವನ್ನಪ್ಪಿದ್ದರು. ಒಂದು ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ಭದ್ರತಾ ಪಡೆಗಳು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ರಾಜಧಾನಿ ಇಸ್ಲಾಮಾಬಾದ್‌ನಿಂದ ಈಶಾನ್ಯಕ್ಕೆ 64 ಕಿಮೀ ದೂರದಲ್ಲಿರುವ ಮುರಿಯನ್ನು ಸರ್ಕಾರವು ವಿಪತ್ತು ಪ್ರದೇಶವೆಂದು ಘೋಷಿಸಿದೆ.

Latest article