Tuesday, October 26, 2021

ಬಾಳೆಗೊನೆಯಿಂದಾಗಿ 3 ಕೋಟಿ ಕಳೆದುಕೊಂಡ ಮಾಲೀಕ

Must read

ಕ್ಯಾನ್ಬೆರಾ: ವಾಸ್ತವವಾಗಿ ನಮ್ಮ ರೈತರು ಹೊಲದಲ್ಲಿ ಕೆಲಸ ಮಾಡುವಾಗ ಸಾಕಷ್ಟು ಬಿದ್ದು ಪೆಟ್ಟು ತಿನ್ನುತ್ತಾನೆ ಅದರೆ ಅದನ್ನ ಲೆಕ್ಕಿಸದ ನಮ್ಮ ರೈತರು ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಾರೆ ಆದರೆ ವಿದೇಶದಲ್ಲಿ ಪರಿಸ್ಥಿತಿ ಬೇರೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ. ತನ್ನ ಮಾಲೀಕನ ವಿರುದ್ಧ ವ್ಯಕ್ತಿಯೊಬ್ಬ 5 ಮಿಲಿಯನ್ ಡಾಲರ್ ಗೆ ಮೊಕದ್ದಮೆ ಹೂಡಿದ್ದು, ನ್ಯಾಯಾಲಯ ಆತನ ಪರವಾಗಿ ತೀರ್ಪು ನೀಡಿದೆ..ವಾಸ್ತವವಾಗಿ ಹೊಲದಲ್ಲಿ ಕೆಲಸ ಮಾಡುತಿದ್ದ ಸಂದರ್ಭದಲ್ಲಿ ಈ ವ್ಯಕ್ತಿ ಮಾಲೀಕರ ಹೊಲದಲ್ಲಿರುವ ಬಾಳೆಮರದಿಂದ ಸುಮಾರು 70 ಕೆ.ಜಿ ಬಾಳೆಹಣ್ಣು ನನ್ನ ಮೇಲೆ ಬಿದ್ದಿದೆ ಎಂದು ಆರೋಪಿಸಿದ ಇದರಿಂದಾಗಿ ತನಗೆ ತೀವ್ರ ಗಾಯಗಳಾಗಿವೆ ಈಗಾಗಿ ತನಗೆ ಪರಿಹಾರವಾಗಿ 5 ಲಕ್ಷ ಡಾಲರ್ ನೀಡಬೇಕು ಎಂದು ಒತ್ತಾಯಿಸಿದ ಈ ಘಟನೆ ನಡೆದಿದ್ದು 2016 ರಲ್ಲಿ..ಇದರ ನಂತರ ತನಗೆ ಪರಿಹಾರ ನೀಡುವಂತೆ ಆತ ನ್ಯಾಯಲಯ ಮೊರೆ ಹೋಗಿದ್ದ ಇದೀಗ ನ್ಯಾಯಲಯ ಆತನ ಪರಿವಾಗಿಯೇ ತೀರ್ಪು ನೀಡಿದೆ..ಕಾರ್ಮಿಕ ಕೋರ್ಟ್ ನಲ್ಲಿ ಯಾವ ರೀತಿ ವಾದ ಮಾಡಿದ ಎಂದರೆ ದೊಡ್ಡ ಮರಗಳಿಂದ ಬಾಳೆಹಣ್ಣು ಸಂಗ್ರಹಿಸುವಾಗ ಅದಕ್ಕೆ ಅನುಭವ ಇರಬೇಕು ಕ್ರಮ ತೆಗೆದುಕೊಂಡರಬೇಕು ಆದರೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬಾಳೆಹಣ್ಣಿನ ಗೊನೆ ನನ್ನ ತಲೆಯ ಮೇಲೆ ಬಿದ್ದ ಕಾರಣ ನಾನು ಮೇಲಿಂದ ಕೆಳಕ್ಕೆ ಬಿದ್ದೆ…. ಘಟನೆ ನಂತರ ನಾನು ಆಸ್ಪತ್ರೆಗೆ ಸೇರಬೇಕಾಯಿತು ಈ ಹಿನ್ನಲೆಯಲ್ಲಿ ನಾನು ಕೆಲಸಕ್ಕೆ ಮರಳಲು ಸಾಧ್ಯವಾಗಲಿಲ್ಲ ಹೀಗಾಗಿ ಮಾಲೀಕರು ನನಗೆ ಪರಿಹಾರ ನೀಡಬೇಕು ಎಂದು ವಾದ ಮಂಡಿಸುತ್ತಾನೆ ನ್ಯಾಯಲಯ ಕೂಡ ಪರಿಹಾರ ಕೊಡಬೇಕು ಎಂದು ಆತನ ಪರವಾಗಿ ತೀರ್ಪು ನೀಡುತ್ತದೆ.. ತಮ್ಮ ಅಂತಿಮ ಆದೇಶದಲ್ಲಿ ಕಾರ್ಮಿಕನಿಗೆ ಮಾಲೀಕರು 502,740 ಅಮೆರಿಕನ್ ಡಾಲರ್ ಅಂದರೆ ಸುಮಾರು 3,77,15,630 ಭಾರತದ ರೂ ಪ್ರಕಾರ ನೀಡುವಂತೆ ಕೋರ್ಟ್ ಸೂಚನೆಯನ್ನು ನೀಡುತ್ತದೆ..

More articles

Latest article