ಯುಎಸ್ ಅಧ್ಯಕ್ಷ ಜೋ ಬಿಡನ್ ಪ್ರಜಾಪ್ರಭುತ್ವದ ಕುರಿತು ವರ್ಚುವಲ್ ಶೃಂಗಸಭೆಯನ್ನು ಕರೆದಿದ್ದಾರೆ. ಡಿಸೆಂಬರ್ 9-10ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಸುಮಾರು 110 ದೇಶಗಳು ಭಾಗವಹಿಸಲಿವೆ. ಇದರಲ್ಲಿ ಚೀನಾವನ್ನು ಆಹ್ವಾನಿಸಲಾಗಿಲ್ಲ, ತೈವಾನ್ಗೆ ಆಹ್ವಾನವಿದೆ ಎಂದು ವರದಿಯಾಗಿದೆ.
ಸಭೆಯಲ್ಲಿ ತೈವಾನ್ ಭಾಗವಹಿಸುವುದರಿಂದ ಯುಎಸ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾಗಲಿದೆ.
ಆಗಸ್ಟ್ನಲ್ಲಿ ಈ ಶೃಂಗಸಭೆಯ ಘೋಷಣೆಯ ಸಂದರ್ಭದಲ್ಲಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸುವಂತಹ ಮೂರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶ್ವೇತಭವನ ಹೇಳಿತ್ತು.