Tuesday, August 16, 2022

ಅನಿಲ ಬೆಲೆ ಏರಿಕೆ: ಬೈಡನ್​ ವಿರುದ್ಧ ಸಿಡಿದೆದ್ದ ಅಮೆಜಾನ್​ ಸಂಸ್ಥಾಪಕ..!

Must read

ಅಮೆರಿಕದಲ್ಲಿ ಗಗನಕ್ಕೇರುತ್ತಿರುವ ಅನಿಲ ಬೆಲೆಗಳನ್ನು ಕಡಿಮೆ ಮಾಡಲು ತೈಲ ಕಂಪನಿಗಳಿಗೆ ಕರೆ ನೀಡಿದ್ದಕ್ಕಾಗಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅಧ್ಯಕ್ಷ ಜೋ ಬೈಡನ್ ಅವರನ್ನು ಟೀಕಿಸಿದ್ದಾರೆ.

ಅನಿಲ ಕೇಂದ್ರಗಳನ್ನು ನಡೆಸುವ ಮತ್ತು ಪಂಪ್​ಗಳಲ್ಲಿ ಬೆಲೆಗಳನ್ನು ನಿಗದಿಪಡಿಸುವ ಕಂಪನಿಗಳಿಗೆ ನನ್ನ ನೇರ ಸಂದೇಶವೆಂದರೆ, ಇದು ಯುದ್ಧದ ಸಮಯ ಮತ್ತು ಜಾಗತಿಕ ಬಿಕ್ಕಟ್ಟಿನ ಸಮಯ ಹಾಗಾಗಿ ಬೆಲೆ ಇಳಿಸುವಂತೆ ಬೈಡೆನ್​ ಕೇಳಿಕೊಂಡಿದ್ದರು.

ಯುಎಸ್​ನ ಪಂಪ್​ನಲ್ಲಿರುವ ಗ್ಯಾಸೋಲಿನ್ ಬೆಲೆಗಳು ವ್ಯಾಪಕವಾಗಿ ಏರಿಕೆಯಾಗಿದೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಬೈಡನ್​ ಸರ್ಕಾರಕ್ಕೆ ಹಿನ್ನಡೆಯಾಗಲಿದೆ. ಅವರು ಲಾಭದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಆದರೆ ಗ್ರಾಹಕರ ಯೋಗಕ್ಷೇಮದ ಬಗ್ಗೆ ಅಲ್ಲ ಎಂದು ಜೆಫ್ ಬೆಜೋಸ್ ದೂರಿದ್ದಾರೆ. ಬೆಲೆ ಇಳಿಸುವ ನಿಟ್ಟಿನಲ್ಲಿ ತೈಲ ಉತ್ಪಾದನಾ ಕಂಪನಿಗಳು ಉತ್ಪಾದನೆ ಹೆಚ್ಚಿಸಿದೆಯಾದರೂ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಅಮೇರಿಕಾದಲ್ಲಿ ಬೈಡನ್​ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

Latest article