Wednesday, June 29, 2022

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳ ಧ್ವಂಸ: ಪ್ರಕರಣ ದಾಖಲು

Must read

ಪಾಕಿಸ್ತಾನದ ಕರಾಚಿ ನಗರದ ಹಿಂದೂ ದೇವಾಲಯವೊಂದರಲ್ಲಿ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಪಾಕಿಸ್ತಾನದ ಅಲ್ಪಸಂಖ್ಯಾತ ಪೂಜಾ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯದ ಇತ್ತೀಚಿನ ಪ್ರಕರಣವಾಗಿದೆ.

ಕರಾಚಿಯ ಕೋರಂಗಿ ಪ್ರದೇಶದ ಶ್ರೀ ಮಾರಿ ಮಾತಾ ದೇವಾಲಯದ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ.  ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಂದಾಜಿನ ಪ್ರಕಾರ, 7.5 ಮಿಲಿಯನ್ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ಸಮುದಾಯದ ಪ್ರಕಾರ, ದೇಶದಲ್ಲಿ 90 ಲಕ್ಷಕ್ಕೂ ಹೆಚ್ಚು ಹಿಂದೂಗಳಿದ್ದಾರೆ. ಪಾಕಿಸ್ತಾನದ ಹಿಂದೂ ಜನಸಂಖ್ಯೆಯ ಹೆಚ್ಚಿನವರು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ಮತಾಂಧರ ಕಿರುಕುಳದ ಬಗ್ಗೆ ಅವರು ಆಗಾಗ ದೂರು ನೀಡುತ್ತಿರುತ್ತಾರೆ.

Latest article