Monday, November 29, 2021

ಅಮೇರಿಕಾದಲ್ಲಿ ಹಿಂದೂ ಹಬ್ಬಕ್ಕೆ ಸಿಗಲಿದೆ ಮತ್ತಷ್ಟು ಮಾನ್ಯತೆ

Must read

ವಾಷಿಂಗ್ ಟನ್: ಅಮೇರಿಕಾದಲ್ಲಿ ನಮ್ಮ ಭಾರತಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಸಂಪ್ರದಾಯ ಆಚರಣೆ ಬಗ್ಗೆ ಸಾಕಷ್ಟು ಗೌರವ ಈ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚಾರಣೆ ಮಾಡಲಾಗುತ್ತಿದೆ ಅಮೇರಿಕಾದ 50ರಾಜ್ಯಗಳ ಪೈಕಿ 20ರಾಜ್ಯಗಳಲ್ಲಿ ಹಾಗೂ 40 ಕ್ಕೂಹೆಚ್ಚು ನಗರಗಳಲ್ಲಿ ಈ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ ಎಂದು ಸಮುದಾಯದ ನಾಯಕರು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹಿಂದೂಗಳು ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ನವರಾತ್ರಿ, ದಸರಾ, ದುರ್ಗಾ ಪೂಜೆ ಮತ್ತು ದೀಪಾವಳಿ ಹಬ್ಬಗಳನ್ನು ಆಚರಿಸುತ್ತಾರೆ ಈ ನಿಟ್ಟಿನಲ್ಲಿ ಅಮೆರಿಕದ ಹಿಂದೂ ಸಂಘಟನೆಗಳು ಅಕ್ಟೋಬರ್ ತಿಂಗಳನ್ನು ಹಿಂದೂಗಳ ಪಾರಂಪರಿಕ ಮಾಸವಾನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಹಿಂದೂ ಸಂಘಟನೆಯ ಮೊದಲ ಹೆಜ್ಜೆಯನ್ನು ಚುನಾಯಿತ ಪ್ರತಿನಿಧಿಗಳು ಸ್ವಾಗತಿಸಿದ್ದು, ಅಮೆರಿಕಾದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ ಸಮುದಾಯದ ಕೊಡುಗೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಅಕ್ಟೋಬರ್‌ ತಿಂಗಳನ್ನು ಹಿಂದೂ ಪಾರಂಪರಿಕ ಮಾಸ ಎಂಬ ಘೋಷಣೆಯನ್ನು ಅಧಿಕೃತ ಗೊಳಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

 

Latest article