Monday, November 29, 2021

ಗೌತಮ್ ಗಂಭೀರ್​ಗೆ ಪಾಕಿಸ್ತಾನದಿಂದ ಬೆದರಿಕೆ ಇ-ಮೇಲ್ ತನಿಖೆಯಲ್ಲಿ ಬಹಿರಂಗ.

Must read

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಬಿಜೆಪಿ ಸಂಸದರಾಗಿರುವ ಗೌತಮ್ ಗಂಭೀರ್ ಅವರಿಗೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ, ಕಾಶ್ಮೀರ (ಐಸಿಸ್) ನಿಂದ ಬೆದರಿಕೆಗಳು ಬಂದಿವೆ. ಇದಾದ ಬಳಿಕ ಅವರ ನಿವಾಸದ ಭದ್ರತೆಯನ್ನು ದೆಹಲಿ ಪೊಲೀಸರು ಹೆಚ್ಚಿಸಿದ್ದಾರೆ. ದೆಹಲಿ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತನಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದರು. ಈ ಬಗ್ಗೆ ಕೇಂದ್ರ ದೆಹಲಿಯ ಡಿಸಿಪಿ ಶ್ವೇತಾ ಚೌಹಾಣ್ ಅವರು ದೂರು ಸ್ವೀಕರಿಸಿದ ನಂತರ ಈ ಬಗ್ಗೆ ತನಿಖೆ ನಡೆಸಿದ್ದರು. ಸದ್ಯ ತನಿಖೆಯ ವರದಿ ಬಂದಿದ್ದು, ವರದಿಯ ಪ್ರಕಾರ ಗಂಭೀರ್‌ಗೆ ಪಾಕಿಸ್ತಾನದಿಂದ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮೇಲ್ ಕಳುಹಿಸಿರುವ ವ್ಯವಸ್ಥೆ, ಅದರ ಐಪಿ ವಿಳಾಸ ಪಾಕಿಸ್ತಾನದಲ್ಲಿದೆ ಎನ್ನುವುದು ಪತ್ತೆಯಾಗಿದೆ.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಗಂಭೀರ್ ಅವರಿಗೆ ಈ ಇಮೇಲ್ ಬಂದಿತ್ತು. ಆ ಇ-ಮೇಲ್​ನಲ್ಲಿ ಅವರ ಕುಟುಂಬದವರನ್ನೂ ಗುರಿಯಾಗಿಸಲಾಗುದು ಎಂದು ಬರೆಯಲಾಗಿತ್ತು. ಇದರೊಂದಿಗೆ ಬುಧವಾರ ಸಂಜೆಯೂ ಅಂಚೆ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. ಬೆದರಿಕೆಯಲ್ಲಿ ಕಾಶ್ಮೀರದಿಂದ ದೂರವಿರಿ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

Latest article