Thursday, January 20, 2022

ಐದು ವರ್ಷಗಳಲ್ಲೇ ಭೀಕರ ಗಣಿ ಅಪಘಾತ: 52 ಮಂದಿ ದಾರುಣ ಸಾವು

Must read

ರಷ್ಯಾದ ಸೈಬೀರಿಯಾ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಆರು ಮಂದಿ ರಕ್ಷಣಾ ಕಾರ್ಯಕರ್ತರು ಕೂಡ ಸೇರಿದ್ದಾರೆ. ರಾತ್ರಿಯವರೆಗೆ 11 ಕಾರ್ಮಿಕರು ಸಾವನ್ನಪ್ಪಿರುವ ವರದಿಗಳು ಬಂದಿವೆ.

ಐದು ವರ್ಷಗಳಲ್ಲಿ ರಷ್ಯಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅತಿದೊಡ್ಡ ಅಪಘಾತ ಇದಾಗಿದೆ. ಮೃತರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ. ಕೆಮೆರೊವೊ ಪ್ರದೇಶವು ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

ಸ್ಥಳೀಯ ಆಡಳಿತದ ಪ್ರಕಾರ, 38 ಜನರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ 4 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ ವಿದ್ಯುತ್ ವಾತಾಯನ ಶಾಫ್ಟ್‌ನಲ್ಲಿ ಬೆಂಕಿ ಪ್ರಾರಂಭವಾಗಿ , ತ್ವರಿತವಾಗಿ ಗಣಿ ಒಳಗೆ ತಲುಪಿದೆ. ಅಲ್ಲಿ ಕಲ್ಲಿದ್ದಲು ಇರುವುದರಿಂದ, ಅದು ವೇಗವಾಗಿ ಉರಿಯುತ್ತದೆ.

ಕೆಲವು ಜನರು ಉಸಿರಾಟದ ತೊಂದರೆ ಎಂದು ದೂರಿದ್ದಾರೆ. ಹೊಗೆಯಲ್ಲಿ ವಿಷಕಾರಿ ಅನಿಲಗಳು ಸೇರಿಕೊಂಡು ಪರಿಸ್ಥಿತಿ ಹದಗೆಡುತ್ತಿದೆ ಎನ್ನುತ್ತಾರೆ ಸ್ಥಳೀಯ ವೈದ್ಯಕೀಯ ತಂಡ. ಈ ಅನಿಲಗಳಲ್ಲಿ ಕೆಲವು ದಹಿಸಬಲ್ಲವು ಮತ್ತು ದೊಡ್ಡ ಸ್ಫೋಟ, ಬೆಂಕಿಯನ್ನು ಉಂಟುಮಾಡಬಹುದು. ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಈ ಪ್ರದೇಶವು ಮಾಸ್ಕೋದಿಂದ ಸುಮಾರು ಮೂರೂವರೆ ಸಾವಿರ ಕಿಲೋಮೀಟರ್ ದೂರದಲ್ಲಿದೆ.

Latest article