Tuesday, October 26, 2021

ಒಂದೇ ದಿನಕ್ಕೆ 50,000 ಕೋಟಿ ನಷ್ಟ ಅನುಭವಿಸಿದ ಫೇಸ್ಬುಕ್

Must read

ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕ ಸ್ಥಗಿತದ ನಂತರ ಮಾರ್ಕ್ ಜುಕರ್‌ಬರ್ಗ್ 7 ಬಿಲಿಯನ್ ಯುಎಸ್ ಡಾಲರ್ಅಂದರೆ ಸುಮಾರು 50,೦೦೦ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿದ್ದು ಫೇಸ್ಬುಕ್ ಸ್ಟಾಕ್ಸ್ 4% ಕುಸಿದಿದೆ.

ಮಾರ್ಕ್ ಜುಕರ್‌ಬರ್ಗ್ ಈ ಹಿಂದೆ ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಬ್ಲೂಮ್‌ಬರ್ಗ್ ಪ್ರಕಾರ, ಫೇಸ್‌ಬುಕ್‌ನ ಸ್ಟಾಕ್‌ಗಳು ಸೋಮವಾರ 4% ರಷ್ಟು ಕುಸಿದಿದ್ದು, ಸೆಪ್ಟೆಂಬರ್ ಮಧ್ಯಭಾಗದಿಂದ 15 ಶೇಕಡಾ ಇಳಿಕೆಯಾಗಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಜಾಗತಿಕ ಸ್ಥಗಿತದಿಂದಾಗಿ ಫೇಸ್‌ಬುಕ್ ಷೇರುಗಳು ಕುಸಿದ ನಂತರ ಜುಕರ್‌ಬರ್ಗ್ ಸಹ ಬಿಲಿಯನೇರ್‌ಗಳ ಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಟ್ಟು $ 121.6 ಬಿಲಿಯನ್ ಸಂಪತ್ತಿನೊಂದಿಗೆ ಜುಕರ್‌ಬರ್ಗ್ ಬಿಲ್ ಗೇಟ್ಸ್‌ ನಂತರದ ಸ್ಥಾನದಲ್ಲಿದ್ದಾರೆ

ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿನ ಅಡಚಣೆಗೆ ಕ್ಷಮೆಯಾಚಿಸಿ, ಟೆಕ್ ದೈತ್ಯ ಸಿಇಒ ಮಾರ್ಕ್ ಜುಕರ್‌ಬರ್ಗ್ ವಿಶ್ವದಾದ್ಯಂತ ಇರುವ ಲಕ್ಷಾಂತರ ಬಳಕೆದಾರರಿಗೆ ವೈಯಕ್ತಿಕ ಕ್ಷಮೆಯಾಚಿಸಿದ್ದಾರೆ ಮತ್ತು ಮಂಗಳವಾರ ಸಂಪೂರ್ಣವಾಗಿ ಎಲ್ಲ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ.

More articles

Latest article