Monday, January 30, 2023

ದುಬೈಯಲ್ಲಿ ದಸರಾ ಉತ್ಸವ ನವೆಂಬರ್ 27ಕ್ಕೆ

Must read

ಅಬುಧಾಬಿ : 24.11.2022

ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ನಾಡ ಹಬ್ಬ ಅರಬ್ ನಾಡಲ್ಲಿ ಎಂಬ ಶೀರ್ಷಿಕೆಯೊಂದಿಗೆ ಹೆಮ್ಮೆಯ ದುಬೈ ಕನ್ನಡ ಸಂಘವು ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿರುವ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವನ್ನು ಇದೆ ನವೆಂಬರ್ ತಿಂಗಳ 27ರಂದು ಎತಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಅದ್ದೊರಿಯಾಗಿ ಆಚರಿಸಲು ಎಲ್ಲಾ ತಯಾರಿಯನ್ನು ನಡೆಸಿದ್ದಾರೆ, ಈ ಕಾರ್ಯಕ್ರಮದಲ್ಲಿ ದುಬೈ ಕನ್ನಡ ಸಂಘದವರು ಭಾರತ ದೇಶಕ್ಕೆ ಆಟವಾಡಿ ರಾಜ್ಯದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿದ ಕ್ರೀಡೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ನೀಡುವ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಈ ಭಾರಿ ಭಾರತ ಹಾಕಿ ತಂಡದ ನಾಯಕ ಅರ್ಜುನ ಪ್ರಶಸ್ತಿ ವಿಜೇತ ಎಸ್ ವಿ ಸುನಿಲ್ ಅವರಿಗೆ ನೀಡಿ ಗೌರವವಿಸುತ್ತಿರುವುದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದೆ.

ಈ ಕೌಟುಂಬಿಕ ದಸರಾ ಉತ್ಸವದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಕವಿಗೋಷ್ಠಿ, ಕ್ವಿಜ್, ಕವನ ಮತ್ತು ಲೇಖನ ಸ್ಪರ್ಧೆ, ರಂಗೋಲಿ, ಅಂತ್ಯಾಕ್ಷರಿ, ದಸರಾ ಗೊಂಬೆ ಸ್ಪರ್ಧೆ, ಕೋಕೋ, ಕಬಡ್ಡಿ, ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್, ಅತ್ಲೆಟಿಕ್ಸ್, ಫುಟ್ಬಾಲ್, ಟೇಬಲ್ ಟೆನಿಸ್, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಚೆಸ್, ಅಂತ್ಯಾಕ್ಷರಿ ಮುಂತಾದ ಹತ್ತು ಹಲವು ಕಲೆ ಮತ್ತು ಸಾಹಿತ್ಯ ಹಾಗು ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ.

ಈ ಪ್ರಯುಕ್ತ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿ ಶಂಕರ್ ಬೆಳಗಾವಿ, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಮಿತಿ ಸದಸ್ಯರುಗಳಾದ ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ವಿಷ್ಣುಮೂರ್ತಿ ಮೈಸೂರು, ಮಧು ಗೌಡ ದಾವಣಗೆರೆ, ಅನಿತಾ ಬೆಂಗಳೂರು,, ಡಾ.ಸವಿತಾ ಮೈಸೂರು, ಮೊಹೀನ್ ಹುಬ್ಬಳ್ಳಿ, ವರದರಾಜ್ ಕೋಲಾರ, ಅಕ್ರಮ್ ಕೊಡಗು ಉಪಸ್ಥಿರಿದ್ದು ಈ ದಸರಾ ಕೌಟುಂಬಿಕ ಉತ್ಸವಕ್ಕೆ ಕುಟುಂಬ ಸಮೇತ ಆಗಮಿಸಬೇಕಾಗಿ ಈ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Latest article