ಬೆಂಗಳೂರು ನಗರದಲ್ಲಿ ಮತ್ತೊಂದು ಸೈಕಲ್ ಕಳ್ಳರ ಗ್ಯಾಂಗ್ ಹುಟ್ಟಿಕೊಂಡಿದೆ. ಆಟೋದಲ್ಲಿ ಬಂದ ಕಳ್ಳರ ಗ್ಯಾಂಗ್ವೊಂದು ಸೈಕಲ್ ಕದಿಯೋ ವಿಡಿಯೋ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವರಾಜ್ ಎಂಬಾತನಿಗೆ ಸೇರಿದ 17 ಸಾವಿರ ಬೆಲೆ ಬಾಳುವ ಸೈಕಲ್ ಇದಾಗಿದ್ದು, ಜಿಮ್ಗೆ ಹೋಗಲು ಸೈಕಲ್ನಲ್ಲಿ ಯುವರಾಜ್ ಬಂದಿದ್ದ. ಇನ್ನು ಇದನ್ನು ನೋಡಿದ ಮೂವರು ಸೈಕಲ್ ಕಳ್ಳರು ಆಟೋದಲ್ಲಿ ಬಂದು, ದೂರದಲ್ಲಿ ನಿಂತು ಗಮನಿಸಿ , ನಂತರ ಯಾರು ಇಲ್ಲದ ವೇಳೆ ಆಟೋದಲ್ಲಿ ಬಂದು ಕೃತ್ಯವನ್ನೆಸಗಿದ್ದಾರೆ. ಸದ್ಯ ಈ ಘಟನೆ ವಿಜಯನಗರದ ಬಳಿ ನಡೆದಿದೆ.