Friday, January 21, 2022

ಕರೋನಾ ಕ್ವಾರಂಟೈನ್ ಹೆಸರಲ್ಲಿ ಜನರನ್ನು ಬಲವಂತವಾಗಿ ಕಬ್ಬಿಣದ ಪೆಟ್ಟಿಗೆಗಳಲ್ಲಿ ಬಂಧಿಸುತ್ತಿರುವ ಚೀನಾ….!

Must read

ಕೊರೊನಾ ನಿಯಂತ್ರಣಕ್ಕಾಗಿ ಚೀನಾ ‘ಶೂನ್ಯ ಕೋವಿಡ್ ನೀತಿ’ಯನ್ನು ಅಳವಡಿಸಿಕೊಂಡಿದೆ. ಇದನ್ನು ಜಾರಿಗೆ ತರಲು ಚೀನಾ ಸರ್ಕಾರ ಜನ ಸಾಮಾನ್ಯರ ಮೇಲೆ ಭೀಕರ ದೌರ್ಜನ್ಯ ನಡೆಸುತ್ತಿದೆ. ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದಲ್ಲಿ ಇದಕ್ಕೆ ಉದಾಹರಣೆಯಾಗಿದೆ. ಇಲ್ಲಿ ಕ್ವಾರಂಟೈನ್ ಸೆಂಟರ್ ಹೆಸರಿನಲ್ಲಿ ಜನರನ್ನು ಕಬ್ಬಿಣದ ಪೆಟ್ಟಿಗೆಗಳಲ್ಲಿ ಇರಿಸಲಾಗುತ್ತಿದೆ. ಅಂತರಾಷ್ಟ್ರೀಯ ಮಾಧ್ಯಮಗಳು ಈ ವಿಷಯ ಬಹಿರಂಗ ಪಡಿಸಿದ ಬೆನ್ನಲ್ಲೇ ಜಗತ್ತೇ ಬೆಚ್ಚಿ ಬಿದ್ದದೆ.
ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರೂ ಸಹ ಈ ಪೆಟ್ಟಿಗೆಗಳಲ್ಲಿ ಇರಿಸಲು ಒತ್ತಾಯಿಸುತ್ತಿದ್ದಾರೆ. ಯಾವುದೇ ಪ್ರದೇಶದಲ್ಲಿ ಒಂದೇ ಒಂದು ಕರೋನಾ ಸೋಂಕು ಕಂಡುಬಂದರೆ, ಆ ಪ್ರದೇಶದ ಜನರನ್ನು ಈ ಪೆಟ್ಟಿಗೆಗಳಲ್ಲಿ ಹಾಕಲಾಗುತ್ತದೆ. ಅನೇಕ ಪ್ರದೇಶಗಳಲ್ಲಿ, ಜನರನ್ನು ಮಧ್ಯರಾತ್ರಿಯಲ್ಲಿ ಅವರ ಮನೆಗಳಿಂದ ಹೊರತೆಗೆದು ಈ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ.
‘ಟ್ರ್ಯಾಕ್ ಅಂಡ್-ಟ್ರೇಸ್’ ತಂತ್ರದ ಅಡಿಯಲ್ಲಿ, ಪಾಸಿಟಿವ್ ಬಂದ ಜನರನ್ನು ಪತ್ತೆಹಚ್ಚಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಪ್ರಸ್ತುತ, ಸುಮಾರು 2 ಕೋಟಿ ಜನರನ್ನು ಅವರ ಮನೆಗಳಲ್ಲಿ ಬಂಧಿಸಲಾಗಿದೆ. ಜನರು ಆಹಾರವನ್ನು ಖರೀದಿಸಲು ಸಹ ಹೊರಬರಲು ಅನುಮತಿ ಇಲ್ಲ.

Latest article