ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯೊಬ್ಬರು ಆತ್ಮಾಹುತಿ ಮಾಡಿಕೊಂಡಿದ್ದು, ಘಟನೆಯಲ್ಲಿ ಮೂವರು ಚೀನಾ ಪ್ರಜೆಗಳು ಸಾವನ್ನಪ್ಪಿದ್ದರು.
ಈ ಘಟನೆಯನ್ನು ಚೀನಾ ವಿದೇಶಾಂಗ ಇಲಾಖೆ ತೀವ್ರವಾಗಿ ಖಂಡಿಸಿದ್ದು, ನಿಮ್ಮ ದೇಶದಲ್ಲಿ ಕೆಲಸ ಮಾಡುತ್ತಿರುವ ನಮ್ಮ ದೇಶದ ಪ್ರಜೆಗಳ ಭದ್ರತೆ ಹೆಚ್ಚಿಸುವಂತೆ ಚೀನಾ, ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದೆ.
ಚೀನಿಯರ ರಕ್ತವನ್ನು ವ್ಯರ್ಥವಾಗಿ ಚೆಲ್ಲಲು ಸಾಧ್ಯವಿಲ್ಲ, ಈ ಘಟನೆಯ ಹಿಂದೆ ಇರುವವರು ಖಂಡಿತವಾಗಿಯೂ ಬೆಲೆ ತೆರುತ್ತಾರೆ. ಈ ಆತ್ಮಾಹುತಿ ದಾಳಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಮಹಿಳೆಯನ್ನು ಪ್ರೇರೇಪಿಸಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಚೀನಾ ಒತ್ತಾಯಿಸಿದೆ.