ಚೀನಾದ ಕುತಂತ್ರ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಖಲೀಫಾ ಬಂದರಿನಲ್ಲಿ ಚೀನಾ ಸದ್ದಿಲ್ಲದೆ ಮಿಲಿಟರಿ ನೆಲೆಯನ್ನು ನಿರ್ಮಿಸುತ್ತಿರುವುದು ಈಗ ಬಹಿರಂಗವಾಗಿದೆ. ಸದ್ಯ ಈಗ ಅಮೆರಿಕ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದೆ. ಕಳವಳಕಾರಿ ಸಂಗತಿಯೆಂದರೆ ಯುಎಇಗೂ ಈ ಬಗ್ಗೆ ತಿಳಿದಿರಲಿಲ್ಲ.
ವಾಲ್ ಸ್ಟ್ರೀಟ್ ಜರ್ನಲ್ ವರದಿಗಳ ಪ್ರಕಾರ, ಯುಎಸ್ ಒತ್ತಡದ ನಂತರ ಯುಎಇ ಕೂಡ ಚೀನಾದ ನಿರ್ಮಾಣಕ್ಕೆ ತಡೆಯೊಡ್ಡಿದೆ. ಉಪಗ್ರಹದಿಂದ ಕ್ಲಿಕ್ಕಿಸಲಾದ ಛಾಯಾಚಿತ್ರಗಳಿಂದ ಯುಎಸ್ ಗುಪ್ತಚರ ಸಂಸ್ಥೆಯು ರಹಸ್ಯ ಮಿಲಿಟರಿ ನೆಲೆಯ ಮಾಹಿತಿಯನ್ನು ಸ್ವೀಕರಿಸಿದೆ. ಅಲ್ಲಿ ದೊಡ್ಡ ಕಟ್ಟಡ ನಿರ್ಮಿಸಲು ದೊಡ್ಡ ಗುಂಡಿಗಳನ್ನು ನಿರ್ಮಿಸುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಯುಎಇ ತನ್ನ ಖಲೀಫಾ ಬಂದರನ್ನು 1.1 ಬಿಲಿಯನ್ ದಿರ್ಹಮ್ಗಳಿಗೆ ($300 ಮಿಲಿಯನ್ ಡಾಲರ್) ಬದಲಾಗಿ ಚೀನಾಕ್ಕೆ ಗುತ್ತಿಗೆ ನೀಡಿದೆ. ಆದರೆ ಚೀನಾ ಯುನೈಟೆಡ್ ಅರಬ್ ಎಮಿರೇಟ್ಸ್ನ ಅನುಮತಿ ಪಡೆಯದೇ, ಅದಕ್ಕೆ ಮಾಹಿತಿಯನ್ನೇ ನೀಡದೆ ಈ ರೀತಿ ಸೇನಾ ನೆಲೆಯನ್ನು ನಿರ್ಮಿಸುತ್ತಿರುವುದರಿಂದ ಅದರ ಕುತಂತ್ರಿ ಬುದ್ದಿ ಮತ್ತೊಮ್ಮೆ ಹೊರ ಬಿದ್ದಿದೆ.
ಚೀನಾ ತನ್ನ ನೆಲೆಯನ್ನು ನಿರ್ಮಿಸುತ್ತಿದ್ದ ಬಂದರು ಅಬುಧಾಬಿಯಿಂದ ಉತ್ತರಕ್ಕೆ 80 ಕಿಮೀ ದೂರದಲ್ಲಿದೆ. ಇಲ್ಲಿ ಚೀನೀ ಮೂಲದ ಕಂಪನಿ ಚೀನಾ ಓಷನ್ ಶಿಪ್ಪಿಂಗ್ (ಗ್ರೂಪ್) ಕಂಪನಿ COSCO ಶಿಪ್ಪಿಂಗ್ ಗ್ರೂಪ್ ಇಲ್ಲಿ ದೊಡ್ಡ ವಾಣಿಜ್ಯ ಕಂಟೈನರ್ ಟರ್ಮಿನಲ್ ಅನ್ನು ನಿರ್ಮಿಸಿದೆ. ತನಿಖೆಯನ್ನು ತಪ್ಪಿಸಲು ಚೀನಾ ಈ ಸೈಟ್ ಅನ್ನು ದೀರ್ಘಕಾಲದವರೆಗೆ ಮುಚ್ಚಿತ್ತು, ಆದರೆ ಯುಎಸ್ ಅವಕಾಶ ಸಿಕ್ಕ ತಕ್ಷಣ ಅದನ್ನು ತನ್ನ ಉಪಗ್ರಹದಿಂದ ಪರಿಶೀಲಿಸಿದೆ.
ಚೀನಾದ ಈ ಕ್ರಮದಿಂದ ಯುಎಇ-ಅಮೆರಿಕ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ ಎಂಬ ವರದಿಗಳು ಹೊರಬಿದ್ದ ನಂತರ ಯುಎಇಯ ಸ್ಪಷ್ಟೀಕರಣವೂ ಮುನ್ನೆಲೆಗೆ ಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಚೀನಾದ ನಿರ್ಮಾಣದ ಬಗ್ಗೆ ಮಾಹಿತಿಯನ್ನು ಹೊಂದಿಲ್ಲ ಎಂದು ಹೇಳಿದೆ. ಚೀನಾದ ಈ ನಡೆಯಿಂದಾಗಿ ಎರಡು ಹಳೆಯ ಮಿತ್ರರಾಷ್ಟ್ರಗಳ ನಡುವೆ ಬಿರುಕು ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ. ಸದ್ಯ ಈ ವಿಚಾರವಾಗಿ ಯುಎಇ ಅಮೆರಿಕದೊಂದಿಗೆ ಸಭೆಯನ್ನು ಆರಂಭಿಸಿದೆ. ರಹಸ್ಯ ಸೇನಾ ನೆಲೆಗಾಗಿ ಚೀನಾದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಯುಎಇ ಸ್ಪಷ್ಟವಾಗಿ ಹೇಳಿದೆ. ಒಟ್ಟಿನಲ್ಲಿ ಈಗಾಗಲೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಚೀನಾಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ನೊಂದಿಗಿನ ಬಿರುಕು ಮತ್ತಷ್ಟು ಸಂಕಷ್ಟ ತಂದೊಡ್ಡುವಂತೆ ಕಂಡು ಬರುತ್ತಿದೆ. ಹೀಗಾಗಿದ್ದೇಯಾದಲ್ಲಿ ಚೀನಾಕ್ಕೆ ಕಚ್ಚಾತೈಲ ಆಮದಿಗೆ ಹೊಡೆತ ಬೀಳುವ ಸಾಧ್ಯತೆಗಳಿದ್ದು, ಚೀನಾದ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.