ಇದೇ ಮೊದಲ ಬಾರಿಗೆ ಹಕ್ಕಿಜ್ವರದ ಸೋಂಕು ಮಾನವನೊಳಗೆ ಪತ್ತೆಯಾಗಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಹೆಚ್ 3 ಎನ್ 8 ತಳಿಯ ಹಕ್ಕಿ ಜ್ವರದ ಮೊದಲ ಮಾನವ ಸೋಂಕು ವರದಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದು ಜನರಲ್ಲಿ ಹರಡುವ ಅಪಾಯ ಕಡಿಮೆ. ಅಂತಹ ಪರಿಸ್ಥಿತಿಯಲ್ಲಿ ಭಯಪಡಬೇಕಿಲ್ಲ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಎಚ್ 3 ಎನ್ 8 ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದು, ನಾಲ್ಕು ವರ್ಷದ ಬಾಲಕ ಇದರಿಂದ ಬಳಲುತ್ತಿದ್ದಾನೆ ಎಂದು ಹೇಳಿದೆ.
ವರದಿ ಪ್ರಕಾರ, ಜ್ವರ ಸೇರಿದಂತೆ ಹಲವಾರು ರೋಗಲಕ್ಷಣಗಳು ಕಂಡುಬಂದ ನಂತರ ಮಗುವಿಗೆ ಎಚ್ 3 ಎನ್ 8 ವೈರಸ್ ಸೋಂಕು ತಗುಲಿರುವುದು ತಿಳಿದು ಬಂದಿದೆ.
ಎಚ್ 3ಎನ್ 8 ಆವೃತ್ತಿಯು ಈ ಹಿಂದೆ ಕುದುರೆಗಳು, ನಾಯಿಗಳು, ಪಕ್ಷಿಗಳಲ್ಲಿ ಕಂಡುಬಂದಿತ್ತು ಎಂದು ಆರೋಗ್ಯ ಆಯೋಗ ಹೇಳಿದೆ. ಇದು ವಿಶ್ವದ ಮೊದಲ ಮಾನವ ಪ್ರಕರಣವಾಗಿದೆ. ರೂಪಾಂತರವು ಇನ್ನೂ ಮಾನವರಿಗೆ ಪರಿಣಾಮಕಾರಿಯಾಗಿ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗದ ಅಪಾಯವು ಕಡಿಮೆ ಎನ್ನಲಾಗಿದೆ.