Tuesday, October 26, 2021

ಈ ಊರಿನಲ್ಲಿ ಮಗುವಿನ ಮರಣದ ನಂತರ ಮರದ ಕಾಂಡದಲ್ಲಿ ಹೂಳುತ್ತಾರೆ:

Must read

ಇಂಡೋನೇಷ್ಯಾ: ಪ್ರತಿಯೊಂದು ದೇಶ ಸ್ಥಳ ತಮ್ಮದೇ ಆದ ವಿಭಿನ್ನ ಪದ್ಧತಿ ಸಂಪ್ರದಾಯ ಆಚರಣೆಗೆ ಹೆಸರುವಾಸಿಯಾಗಿದೆ..ಅವುಗಳಲ್ಲಿ ಹಲವು ವಿಶಿಷ್ಟೆತೆಗೆ ಹೆಸರುವಾಸಿಯಾಗಿದೆ..ಇಂಡೋನೇಷ್ಯಾದ ರಾಜಧಾನಿ ಮಕಾಸರ್ ನಿಂದ ಸುಮಾರು 186 ಮೈಲಿ ತರೋಜಾ ಪರ್ವತದಲ್ಲಿ ವಿಶಿಷ್ಟವಾದ ಆಚಾರಣೆ ಮಾಡುತ್ತಾರೆ ಈ ಆಚಾರಣೆ ನಿಜಕ್ಕೂ ನಿಮಗೆ ಆಶ್ಚರ್ಯ ತರುತ್ತೆ.
ಮಗುವಿನ ಮರಣದ ನಂತರ,ಈ ಜನರು ಮೃತ ದೇಹವನ್ನು ಮರದ ಕಾಂಡದಲ್ಲಿ ಹೂಳುತ್ತಾರೆ ಇದು ಇಂಡೋನೇಷ್ಯಾದ ಒಂದು ವಿಶಿಷ್ಟ ಸಂಪ್ರದಾಯ.. ಈ ದೇಶದಲ್ಲಿ ಮಗುವಿನ ಮರಣದ ನಂತರ ,ಈ ಜನರು ಮೃತ ದೇಹವನ್ನು ಮರದ ಬುಡದಲ್ಲಿ ಹೂಳುತ್ತಾರೆ ಇದರಿಂದ ಅದುಪ್ರಕೃತಿಯ ಮಡಿಲಲ್ಲಿ ಹೀರಿಕೊಳ್ಳುತ್ತದೆ ಮತ್ತುಸ್ವಲ್ಪ ಸಮಯದ ನಂತರ ಮೃತ ದೇಹವು ಕ್ರಮೇಣವಾಗಿ ನೈಸರ್ಗಿಕವಾಗಿ ಮರದೊಂದಿಗೆ ಬೆರೆಯುತ್ತದೆ ಎಂದು ಇಲ್ಲಿನ ಜನರು ಹೇಳುತ್ತಾರೆ..
ಈ ಆಚಾರಣೆ ಹಿಂದೆ ಜನರ ಮನಿಸ್ಸಿನಲ್ಲಿ ಹೆಮ್ಮೆಯ ಭಾವನೆ ಕೂಡ ಇರುತ್ತದೆ..ಅದು ಸುಂದರವಾದ ಹಸಿರು ಮರವಾಗಿರುತ್ತದೆ ಮತ್ತು ಸಾವಿನ ನಂತರವೂ ತಮ್ಮ ಮಗು ತಮ್ಮಿಂದ ದೂರ ಹೋಗಿದೆ ಎಂದು ಅವರಿಗೆ ಅನಿಸುವುದಿಲ್ಲ ಕಾರಣ ಅವರು ಮರವಾಗಿ ಬೆಳೆಯುತ್ತಾರೆ ಎಂದು..ಮಕ್ಕಳ ಮೃತ ದೇಹವನ್ನು ಮರದ ಬುಡಕ್ಕೆ ಹಾಕುವ ಮೋದಲು ಬಟ್ಟೆಯಿಂದ ಸುತ್ತಿಡಲಾಗುತ್ತದೆ ಆದಾದ ನಂತರ ಮಾತ್ರ ಆ ದೇಹವನ್ನು ಮರದ ಕಾಂಡದಲ್ಲಿ ಹೂಳುತ್ತಾರೆ ಈ ಪದ್ಧತಿಯನ್ನು ಇಲ್ಲಿ ಮಾನೆನ್ ಎಂದು ಕರೆಯುತ್ತಾರೆ..

More articles

Latest article