Friday, January 21, 2022

ಗಡಿ ವಿವಾದದಲ್ಲಿ ಭಾರತದ ಪರ ನಮ್ಮ ಒಲವು ಎಂದ ಅಮೇರಿಕಾ

Must read

ಭಾರತ ಮತ್ತು ಚೀನಾದ ಗಡಿ ವಿವಾದ ಇಂದು ನೆನ್ನೆಯದಲ್ಲ .ಮೊನ್ನೆ ಮೊನ್ನೆಯಷ್ಟೆ ಚೀನಾ ಭಾರತದ ಗಡಿ ಭಾಗದಲ್ಲಿ ಗ್ರಾಮಗಳನ್ನ ನಿರ್ಮಿಸಿದೆ ಎಂಬ ಸುದ್ಧಿ ಕೇಳಿ ಬಂದಿತ್ತು. ಈಗ ಗಡಿ ವಿಚಾರದಲ್ಲಿ ಭಾರತದ ಪರವಾಗಿ ತಾವು ನಿಲ್ಲುವುದಾಗಿ ಅಮೇರಿಕಾ ಹೇಳಿಕೆ ನೀಡಿದೆ .

ಅಮೇರಿಕಾದ ಶ್ವೇತಭವನದ ಪತ್ರಿಕಾ ಕಾರ್ಯ ದರ್ಶಿ ಜೆನ್ ಸಾಕಿ ಅವರು, ಭಾರತ ಮತ್ತು ಚೀನಾದ ಗಡಿ ಸಮಸ್ಯೆಯನ್ನ ಅಮೇರಿಕಾ ಅಧ್ಯಕ್ಷರೂ ಕೂಡ ಗಮನಿಸುತ್ತಿದ್ದಾರೆ. ಇದು ಸೌಹಾರ್ದ್ಯವಾಗಿ ವಿವಾದ ಇತ್ಯರ್ಥ ಆಗಬೇಕಿದೆ.. ಆದರೆ ಗಡಿ ವಿಚಾರಕ್ಕೆ ಬಂದರೆ ಅಮೇರಿಕಾ ಭಾರತದ ಪರ ನಿಲ್ಲುತ್ತದೆ ಎಂಬ ಮಾಹಿತಿ ಹೊರ ಹಾಕಿದ್ದಾರೆ

ಚೀನಾದ ಬಗ್ಗೆ ಕೊಂಚ ಅಸಮಧಾನ ವ್ಯಕ್ತಪಡಿಸಿದ ಶ್ವೇತಭವನ , ಚೀನಾ ನೆರೆ ರಾಷ್ಟ್ರಗಳನ್ನ ಬೆದರಿಸಿಟ್ಟುಕೊಳ್ಳುವ ತಂತ್ರ ಮಾಡ್ತಿದೆ.ಇದು ಸರಿಯಲ್ಲ ಎಂದು ಹೇಳಿದೆ .ಅಷ್ಟಲ್ಲದೆ ಚೀನಾದ ವಿರುದ್ಧ ವಿವಿಧ ದೇಶಗಳು ಕೂಡ ಅಸಮಧಾನ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

ಇನ್ನು ಲಡಾಕ್ ವಿಚಾರದ ಮಾತುಕತೆ ನಾಳೆ ನಡೆಯಲಿದೆ .14 ಸುತ್ತಿನ ಮಾತುಕತೆಯೂ ಸೌಹಾರ್ದ್ಯ ರೀತಿಯಲ್ಲಿ ನಡೆಯಬೇಕಿದೆ. ಭಾರತದ ಕಾರ್ಪ್ಸ್ ಕಮಾಂಡರ್ ಕಳೆದ ಮೂರು ತಿಂಗಳ ಹಿಂದೆಯಷ್ಟೆ ಚೀನಾದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿತ್ತು. ಇನ್ನು ಗಡಿ ವಿಚಾರದಲ್ಲಿ ಚೀನಾ ಕ್ಯಾತೆ ತೆಗೆದಯುತ್ತಿರುವ ಈ ಸಂಧರ್ಭದಲ್ಲಿ ಅಮೇರಿಕಾದ ಬೆಂಬಲ ಸ್ವಾಗತಾರ್ಹವಾಗಿದೆ.

Latest article