Monday, November 29, 2021

ಆಫ್ರಿಕನ್ ಸಿಂಹದ ಬೋನಿಗೆ ಹಾರಿದ ವ್ಯಕ್ತಿ..! ಮುಂದೇನಾಯ್ತು..?

Must read

ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿರುವ ಸಿಂಹದ ಆವರಣಕ್ಕೆ ವ್ಯಕ್ತಿಯೊಬ್ಬ ಹಾರಿದ್ದಾನೆ. ಆಫ್ರಿಕನ್ ಲಯನ್ ಕಂದಕ ಪ್ರದೇಶದಲ್ಲಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ. ನಂತರ ಮೃಗಾಲಯದ ಅಧಿಕಾರಿಗಳು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿಯನ್ನು ಜಿ.ಸಾಯಿ ಕುಮಾರ್ ಎಂದು ಗುರುತಿಸಲಾಗಿದೆ.

ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನರು ಕೂಗಿ, ಜಾಗರೂಕರಾಗಿರಿ ಎಂದು ಹೇಳಿ ,ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ ಸಂಪೂರ್ಣವಾಗಿ ನಿಷೇಧಿತ ಪ್ರದೇಶವಾಗಿರುವ ಪ್ರದರ್ಶಿತ ಆವರಣದಲ್ಲಿ ಸಿಂಹಗಳನ್ನು ಬಿಡಲಾಗುತ್ತದೆ. ಈ ವ್ಯಕ್ತಿ ಮೋಜಿಗಾಗಿ ಈ ರೀತಿ ಮಾಡಿರುವುದು ಕಂಡು ಬಂದಿದೆ.

Latest article