ಈ ಸ್ಟೋರಿ ಓದಿದ್ರೆ ಪ್ರೀತಿ ಹೀಗೂ ಇರಬಹುದೇ ಎಂದು ಅನ್ನಿಸದೇ ಇರೋದಿಲ್ಲ. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಪತ್ನಿಯನ್ನ ಕಳೆದುಕೊಂಡ ದುಃಖದಲ್ಲಿ ಪತಿ ತನ್ನ ಮುದ್ದಿನ ಪತ್ನಿಯ ಮೇಣದ ಮೂರ್ತಿಯನ್ನು ಮಾಡಿಸಿದ್ದು ಗೊತ್ತೇ ಇದೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲೊಬ್ಬ ಪತಿ ಸುಮಾರು 20 ವರ್ಷಗಳ ಕಾಲ ತನ್ನ ಪತ್ನಿಯ ಶವದೊಂದಿಗೆ ವಾಸಿಸಿದ್ದಾನೆ.
ಥೈಲ್ಯಾಂಡ್ನಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಎರಡು ದಶಕಗಳಿಗೂ ಹೆಚ್ಚು ಕಾಲ ತನ್ನ ಪತ್ನಿಯ ಶವದೊಂದಿಗೆ ವಾಸಿಸುತ್ತಿದ್ದ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಚರಣ್ ಜನವಾಚಕಲ್ ಅವರು ತಮ್ಮ ಪತ್ನಿಯ ಮರಣದ 21 ವರ್ಷಗಳ ನಂತರ ಏಪ್ರಿಲ್ 30ರಂದು ಪತ್ನಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಚಾರ್ನ್ ಜನ್ವಾಚಕಲ್ ತನ್ನ ಹೆಂಡತಿಯ ದೇಹವನ್ನು ತನ್ನ ಪಕ್ಕದಲ್ಲೇ ಇದ್ದ ಒಂದು ಸಣ್ಣ ಕೋಣೆಯಲ್ಲಿ ಇರಿಸಿಕೊಂಡಿದ್ದ ಮತ್ತು ಆತ ಪತ್ನಿ ಇನ್ನೂ ಜೀವಂತವಾಗಿದ್ದಾಳೆ ಎಂದು ಭಾವಿಸಿ ಅವಳೊಂದಿಗೆ ಮಾತನಾಡುತ್ತಿದ್ದ ಎನ್ನಲಾಗಿದೆ. ನವಾಚಕಲ್ ಪತ್ನಿ 2001 ರಲ್ಲಿ ಕಾಯಿಲೆಯಿಂದ ನಿಧನರಾಗಿದ್ದರು.