Monday, November 29, 2021

ಲಸಿಕೆ ಹಂಚಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಪ್ 10 ರಾಜ್ಯಗಳು

Must read

ಕರೋನಾ ಲಸಿಕೆಯ ಹಂಚಿಕೆಯಲ್ಲಿ ಭಾರತವು 100 ಕೋಟಿಗಳ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ದೇಶಾದ್ಯಂತ ಎಲ್ಲಾ ರಾಜ್ಯಗಳು 100 ಕೋಟಿ ಕರೋನಾ ಲಸಿಕೆ ಹಾಕುವಲ್ಲಿ ಉತ್ತಮವಾಗಿ ಸ್ಪಂದಿಸಿವೆ . ಆದರೆ ಕೆಲವು ರಾಜ್ಯಗಳು 9 ತಿಂಗಳ ಕರೋನಾ ವ್ಯಾಕ್ಸಿನೇಷನ್ ನಲ್ಲಿ ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯ ಪ್ರದೇಶಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಟ್ಟು ಟಾಪ್ 10 ರಾಜ್ಯಗಳ ಪಟ್ಟಿಯನ್ನು ನೋಡೋದಾದ್ರೆ.

ಟಾಪ್ 10 ಲಸಿಕೆ ರಾಜ್ಯಗಳಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ

ಉತ್ತರ ಪ್ರದೇಶ – ಮೊದಲ ಡೋಸ್ 9.43 ಕೋಟಿ , ಎರಡನೇ ಡೋಸ್ 2.78 ಕೋಟಿ
ಮಹಾರಾಷ್ಟ್ರ – ಮೊದಲ ಡೋಸ್ 6.43 ಕೋಟಿ , ಎರಡನೇ ಡೋಸ್ 2.88 ಕೋಟಿ
ಪಶ್ಚಿಮ ಬಂಗಾಳ – ಮೊದಲ ಡೋಸ್ 4.97 , ಎರಡನೇ ಡೋಸ್ 1.87
ಗುಜರಾತ್ – ಮೊದಲ ಡೋಸ್ 4.41 ಕೋಟಿ, ಎರಡನೇ ಡೋಸ್ 2.35 ಕೋಟಿ
ಮಧ್ಯಪ್ರದೇಶ – ಮೊದಲ ಡೋಸ್ 4.94 ಕೋಟಿ , ಎರಡನೇ ಡೋಸ್ 1.77 ಕೋಟಿ
ಬಿಹಾರ – ಮೊದಲ ಡೋಸ್ 4.80 ಕೋಟಿ, ಎರಡನೇ ಡೋಸ್ 1.54 ಕೋಟಿ
ಕರ್ನಾಟಕ – ಮೊದಲ ಡೋಸ್ 4.12 ಕೋಟಿ, ಎರಡನೇ ಡೋಸ್ 2.05 ಕೋಟಿ
ರಾಜಸ್ಥಾನ – ಮೊದಲ ಡೋಸ್ 4.21 ಕೋಟಿ, ಎರಡನೇ ಡೋಸ್ 1.88 ಕೋಟಿ
ತಮಿಳುನಾಡು – ಮೊದಲ ಡೋಸ್ 3.94 ಕೋಟಿ , ಎರಡನೇ ಡೋಸ್ 1.44 ಕೋಟಿ
ಆಂಧ್ರಪ್ರದೇಶ – ಮೊದಲ ಡೋಸ್ 3.10 ಕೋಟಿ , ಎರಡನೇ ಡೋಸ್ 1.75 ಕೋಟಿ

ಪ್ರಸ್ತುತ, ಭಾರತದ 18+ ಜನಸಂಖ್ಯೆಯ 74.9 ಪ್ರತಿಶತದಷ್ಟು ಜನರು ಕನಿಷ್ಠ ಒಂದು ಡೋಸ್ ತೆಗೆದುಕೊಂಡಿದ್ದಾರೆ ಮತ್ತು 18+ ಜನಸಂಖ್ಯೆಯ 30.9% ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ. ದೇಶದಲ್ಲಿ ಕೋವಿಡ್ -19 ಲಸಿಕೆಯ ಹಂಚಿಕೆ 100 ಕೋಟಿ ದಾಟುತ್ತಿದ್ದಂತೆ ಪ್ರಧಾನಿ ತಮ್ಮ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ, ‘ನಮ್ಮ ಭಾರತದಲ್ಲಿ ವ್ಯಾಕ್ಸಿನೇಷನ್ ಜನವರಿ 16 ರಂದು ಆರಂಭವಾಯಿತು. ಆ ಸಮಯದಲ್ಲಿ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಯೋಧರಿಗೆ ನೀಡಲಾಯಿತು.

Also read:  ಸರ್ವ ರೋಗಕ್ಕೂ ಮದ್ದು ವರ್ಜಿನ್ ಕೋಕೊನಟ್ ಆಯಿಲ್

ಇದರ ನಂತರ ಮಾರ್ಚ್ 1 ರಿಂದ ಎರಡನೇ ಹಂತದ ಲಸಿಕೆ ಹಂಚಿಕೆ ಆರಂಭವಾಯ್ತು ಇದರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ನೀಡಲಾಯ್ತು. ಇನ್ನು ಏಪ್ರಿಲ್ 1 ರಿಂದ, ದೇಶದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆಯನ್ನು ನೀಡಲಾಯಿತು. ಮೇ 1 ರಂದು, 18 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆ ನೀಡುವುದಾಗಿ ಘೋಷಿಸಲಾಯಿತು. ಆದಾಗ್ಯೂ, ಆರಂಭದಲ್ಲಿ ಇದನ್ನು ದೇಶದ ಅತ್ಯಂತ ಸೋಂಕಿತ ನಗರಗಳಿಂದ ಆರಂಭಿಸಲಾಯಿತು.
ಪ್ರಸ್ತುತ, ದೇಶದ 63,467 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಇವುಗಳಲ್ಲಿ 61,270 ಸರ್ಕಾರಿ ಮತ್ತು 2,197 ಖಾಸಗಿ ಕೇಂದ್ರಗಳಾಗಿವೆ.

Latest article