Monday, November 29, 2021

ಮಣ್ಣು ಮಕ್ಕಳ ಆರೋಗ್ಯ ಕಾಪಾಡುತ್ತೆ, ನಿಮ್ಮ ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಡಿ, ಮೊಬೈಲ್ನಲ್ಲಿ ಅಲ್ಲ

Must read

ಮಕ್ಕಳಿಗೆ ಕ್ರೀಡೆಗಳೆಂದರೆ ಪ್ರಾಣ ಅದರಲ್ಲೂ ಹೊರಾಂಗಣ ಆಟಗಳನ್ನು ಇನ್ನೂ ಜಾಸ್ತಿ ಪ್ರೀತಿಸುತ್ತಾರೆ. ಸಣ್ಣ ಮಕ್ಕಳು ದಿನವಿಡಿ ಧೂಳು ಮತ್ತು ಕೆಸರಿನಲ್ಲಿ ಹೊರಗೆ ಆಡ್ತಾನೇ ಇರ್ತಾರೆ . ಅನೇಕ ಜನರು ತಮ್ಮ ಮಕ್ಕಳನ್ನು ಬೆಳಿಗ್ಗೆ ಮತ್ತು ಸಂಜೆ ಆಟವಾಡಲು ಉದ್ಯಾನವನಕ್ಕೆ ಕರೆದೊಯ್ಯುವವರು, ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಕೇಲಸಗಳಲ್ಲಿ ನಿರತರಾಗಿರುವ ಕಾರಣ ಮಕ್ಕಳು ಒಳಾಂಗಣ ಆಟಗಳಲ್ಲಿ ಹೆಚ್ಚಿನ ಅಭಿರುಚಿ ಹೊಂದುತ್ತಿದ್ದಾರೆ. ಮಕ್ಕಳು ಮೊಬೈಲ್ ನಲ್ಲಿ ಗೆಮ್ಸ್ ಗಳನ್ನು ಆಡುವದರಿಂದ ಹೊರಗೆ ಹೋಗಿ ಆಡುವುದನ್ನು ಸಹ ಇಷ್ಟಪಡುತ್ತಿಲ್ಲ. ನೀವು ಕೂಡಾ ಗಮನಿಸಿರಬೇಕು ನಿಮ್ಮ ಸುತ್ತಮುತ್ತಲು ಮಕ್ಕಳು ಹಗಲು ರಾತ್ರಿ ಹೇಗೆ ಮೊಬೈಲ್ ನಲ್ಲಿ ಕಣ್ಣಾಡಿಸುತ್ತಾ ಇರುತ್ತಾರೆಂದು. ಮಕ್ಕಳು ಮೊಬೈಲ್‌ನಲ್ಲಿ ತೊಡಗಿಸಿಕೊಂಡಿದ್ದರೆ ಪೋಷಕರು ತಮ್ಮ ಪಾಡಿಗೆ ತಾವು ಇರುತ್ತಾರೆ ಹೊರತು ಮಕ್ಕಳು ಮೊಬೈಲ್ ನಲ್ಲಿ ಎನ್ನು ಮಾಡುತ್ತಿದ್ದಾರೆಂದು ಗಮನಿಸುವುದಿಲ್ಲ. ಮಕ್ಕಳಿಗೆ ಮೊಬೈಲ್ ಕೊಟ್ಟರೆ ಗಲಾಟೆ ಮಾಡುವುದಿಲ್ಲವೆಂದು ಪೋಷಕರು ಮೊಬೈಲ್ ಕೊಟ್ಟು ಸುಮ್ಮನೆ ಬಿಡುತ್ತಾರೆ. ಆದರೆ ಅದರ ಪರಿಣಾಮ ಮಕ್ಕಳ ಮೇಲೆ ಎಷ್ಟು ಬೀರುತ್ತದೆಂದು ಅವರು ಯೋಚಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಹೊರಗೆ ಮಣ್ಣಿನಲ್ಲಿ ಆಟವಾಡದಂತೆ ಗದರಿಸುತ್ತಾರೆ, ಕಾರಣ ಮಕ್ಕಳು ಮಣ್ಣಿನಲ್ಲಿ ಆಟವಾಡುವದರಿಂದ ಅವರು ಬಟ್ಟೆಗಳನ್ನು ಹಾಳುಮಾಡುವುದಲ್ಲದೆ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನೂಂಟುಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಮಣ್ಣಿನಲ್ಲಿ ಮಕ್ಕಳು ಆಟವಾಡುವುದರಿಂದ ಅದರ ಪ್ರಯೋಜನಗಳು ಪೊಷಕರಿಗೆ ತಿಳಿದಿಲ್ಲ. ಬಾಲ್ಯದ ನೆನಪುಗಳು ಜೀವನ ಪರ್ಯಂತ ಅದ್ಭುತ ನೆನಪುಗಳಾಗಿರುತ್ತವೆ. ಮನುಷ್ಯನಿಗೆ ಜೀವನದಲ್ಲಿ ಒಳ್ಳೆಯ ನೆನಪುಗಳು ಎಷ್ಟೊ ಬಾರಿ ಜೀವಿಸಲು ಸ್ಪೂರ್ತಿಯಾಗಿರುತ್ತವೆ. ಅದೇ ನೆನಪುಗಳು ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿರುತ್ತವೆ. ಆದ್ದರಿಂದ ನಿಮ್ಮ ಮಕ್ಕಳು ಆಚೆ ಆಟವಾಡುವಾಗ ನಿಲ್ಲಿಸಬೇಡಿ ಏಕೆಂದರೆ ಅವರು ಮಣ್ಣಿನಲ್ಲಿ ಆಡುವುದರಿಂದ ಅನೇಕ ಪ್ರಯೋಜನಗಳಿವೆ. ಅವು ಯಾವುಗಳೆಂದು ಈ ಕೆಳಗೆ ವಿವರಿಸಲಾಗಿದೆ. ಇನ್ನು ಮನುಷ್ಯನ ದೇಹಕ್ಕೆ ಸೂಕ್ಶ್ಮಾಣು ಜೀವಿಗಳು ಕೆಲಮಟ್ಟಕ್ಕೆ ಅವಶ್ಯಕತೆ ಇದೆ. ಮಣ್ಣಿನಲ್ಲಿರುವ ಸೂಕ್ಷ್ಮ ಸೂಕ್ಷ್ಮಾಣುಜೀವಿಗಳೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ, ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ಸಣ್ಣ ಕಾಯಿಲೆಗಳು ಬರದಂತೆ ತಪ್ಪಿಸುತ್ತವೆ. ಆದ್ದರಿಂದ ಮಣ್ಣಿನಲ್ಲಿ ಆಡುವುದರಿಂದ ಪರೋಕ್ಷವಾಗಿ ಉತ್ತಮವಾದ ಆರೋಗ್ಯ ಸಿಗುತ್ತದೆ. ಮಣ್ಣಿನಲ್ಲಿ ಆಟವಾಡುವದರಿಂದ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇನ್ನು ಮಣ್ಣಿನಲ್ಲಿ ಆಟವಾಡುವುದರಿಂದ ಮಕ್ಕಳು ಮಾನಸಿಕವಾಗಿ ಸದೃಡವಾಗುತ್ತಾರೆ. ಅವರು ಪ್ರಕೃತಿಗೆ ಹತ್ತಿರವಾಗುತ್ತಾರೆ. ಪರಿಸರದ ಬಗ್ಗೆ ಜ್ಞಾನ ಬರುತ್ತದೆ. ಮುಂಬರುವ ಪೀಳಿಗೆಗೆ ಪ್ರಕೃತಿಯೊಂದಿಗೆ ಸಂಪರ್ಕ ಕಲ್ಪಿಸುವುದು ಬಹಳ ಮುಖ್ಯ. ಮಣ್ಣಿನಲ್ಲಿ ಆಟವಾಡುವುದು ಮಕ್ಕಳನ್ನು ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅವರ ಕಣ್ಣು ಮತ್ತು ದೇಹದ ಆರೋಗ್ಯವು ಉತ್ತಮವಾಗಿರುತ್ತದೆ. ಜೇಡಿಮಣ್ಣಿನಲ್ಲಿ ಆಡುವುದು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಸ್ನೇಹಿತರೊಂದಿಗೆ ಆಟವಾಡುವ ಮೂಲಕ ಸಮನ್ವಯ ಮತ್ತು ಬೆಂಬಲದ ನಿಜವಾದ ಅರ್ಥವನ್ನೂ ಆ ಮಗು ಕಲಿಯುತ್ತದೆ. ಅಮೆರಿಕದ ‘ಬ್ರಿಸ್ಟಲ್ ವಿಶ್ವವಿದ್ಯಾಲಯ’ ಸಂಶೋಧನೆಯೊಂದರಲ್ಲಿ, ಬಾಲ್ಯದಲ್ಲಿ ಮಕ್ಕಳಿಗೆ ಮಣ್ಣಿನಲ್ಲಿ ಆಡುವುದನ್ನು ತಡೆಯುವರಿಂದ ಮಕ್ಕಳು ಭವಿಷ್ಯದಲ್ಲಿ ರಕ್ತದೊತ್ತಡ ಮತ್ತು ಇತರ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದಿದೆ. ಇದಲ್ಲದೆ, ಮಣ್ಣಿನಲ್ಲಿ ಆಟವಾಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ, ಈ ಕಾರಣದಿಂದಾಗಿ ದೇಹದಾದ್ಯಂತ ರಕ್ತ ಪರಿಚಲನೆ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಉದ್ಯಾನವನಗಳಲ್ಲಿ, ತೆರೆದ ಮೈದಾನದಲ್ಲಿ, ಹೊರಾಂಗಣದಲ್ಲಿ ಆಟವಾಡುವುದರಿಂದ ಅನುಕೂಲವೆಂದರೆ ಮಣ್ಣಿನಲ್ಲಿ ಕಂಡುಬರುವ ಅಂಶಗಳು ಮಕ್ಕಳ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಮಕ್ಕಳು ಮಣ್ಣಿನಲ್ಲಿ ಆಡುವದರಿಂದ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗಿರುತ್ತಾರೆ. ಭಾರತದ ಹಳ್ಳಿಗಳಲ್ಲಿ ಪ್ರಾಚೀನ ಕಾಲದಿಂದಲೂ, ಹಿರಿಯರು ಸಾಮಾನ್ಯವಾಗಿ ಹೇಳುತ್ತಿದ್ದರು ಮಾನವ ದೇಹವು ಮಣ್ಣಿನಿಂದ ಮಾಡಲ್ಪಟ್ಟಿದೆ ಮತ್ತು ಅದು ಒಂದು ದಿನ ಮಣ್ಣಿನಲ್ಲಿ ಮಣ್ಣಾಗಿ ಹೊಗುತ್ತದೆ ಎಂದು ಹೇಳುತ್ತಿದ್ದರು. ಇದು ನಿಜವೆಂದೇ ಹೇಳಬಹುದು. ಮಕ್ಕಳು ಮಣ್ಣಿನಲ್ಲಿ ಆಡುವದರಿಂದ ದೊಡ್ಡ ಪ್ರಯೋಜನವೆಂದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದೆ ಮುಖ್ಯವಾಗಿ ಮೊಬೈಲ್‌ನಿಂದ ದೂರವಿರುತ್ತಾರೆ.

Also read:  ಕೊರೊನಾದಿಂದ ಖಿನ್ನತೆಯೇ.. ರಮೇಶ್​ ಅವರ ಮಾತು ಕೇಳಿ ಟೆನ್ಶನ್​ ಫ್ರೀಯಾಗಿ

Latest article