Monday, November 29, 2021

ರಾಜಧಾನಿಯಲ್ಲಿ ಡೆಂಗ್ಯೂಗೆ ಮೊದಲ ಬಲಿ

Must read

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ರೋಗವು ವೇಗವಾಗಿ ಹರಡಲು ಪ್ರಾರಂಭಿಸಿದೆ. ಈ ವರ್ಷ ಡೆಲ್ಲಿಯಲ್ಲಿ ಮೊದಲ ಸಾವು ಕೂಡ ಸಂಭವಿಸಿದೆ. ಮಾಹಿತಿಯ ಪ್ರಕಾರ ಅಕ್ಟೋಬರ್ 15 ರ ಹೊತ್ತಿಗೆ, ದೆಹಲಿಯ ಪಕ್ಕದಲ್ಲಿರುವ ಉತ್ತರ ಪ್ರದೇಶದ ನೋಯ್ಡಾದಲ್ಲಿ, ಡೆಂಗ್ಯೂ ಪೀಡಿತರ ಸಂಖ್ಯೆ 193 ಕ್ಕೆ ತಲುಪಿದೆ. ಆದಾಗ್ಯೂ, ಅಧಿಕಾರಿಗಳು ನೋಯ್ಡಾದಲ್ಲಿ ಯಾವುದೇ ಡೆಂಗ್ಯೂ ಹಾಟ್‌ಸ್ಪಾಟ್ ಅನ್ನು ಪತ್ತೆ ಮಾಡಿಲ್ಲ ಈ ಹಿಂದೆ 2019 ರಲ್ಲಿ ಗರಿಷ್ಠ 40 ಜನ ಡೆಂಗ್ಯೂ ಪೀಡಿತರಾಗಿದ್ದರು.

ಅಂಕಿಅಂಶಗಳನ್ನು ನೋಡುವುದಾದರೆ , 2016 ರಲ್ಲಿ 17, 2017 ರಲ್ಲಿ 22, 2018 ರಲ್ಲಿ 28, 2019 ರಲ್ಲಿ 40, 2020 ರಲ್ಲಿ 28 ಡೆಂಗ್ಯೂ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಅದೇ ಕಥೆಯು ಗಾಜಿಯಾಬಾದ್‌ನದ್ದಾಗಿದೆ ಈ ವರ್ಷ ಇಲ್ಲಿಯವರೆಗೆ, ಗಾಜಿಯಾಬಾದ್‌ನಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ 624 ಕ್ಕೆ ತಲುಪಿದೆ. ಇದು 2016 ರಲ್ಲಿ 621 ಕ್ಕೂ ಹೆಚ್ಚು ಡೆಂಗ್ಯೂ ಪೀಡಿತರ ಪ್ರದೇಶವಾಗಿತ್ತು .

ಕಳೆದ ಒಂದು ವಾರದಲ್ಲಿ ದೆಹಲಿಯಲ್ಲಿ 243 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ, ಅತೀ ಹೆಚ್ಚು ಜನನಿಬಿಡತೆಯಿಂದ ಕೂಡಿರುವ ಪ್ರದೇಶವಾಗಿದ್ದರೂ ಡೆಂಗ್ಯೂ ಬಗ್ಗೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳದೇ ಇರುವುದು ಕೂಡ ಡೆಂಗ್ಯೂ ಪೀಡತರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತದೆ. ಸದ್ಯ ಕೊರೋನಾ ಮುಕ್ತ ದಿನಗಳನ್ನು ಎದುರು ನೋಡುತ್ತಿರುವ ಜನರಿಗೆ ಡೆಂಗ್ಯೂ ಅಬ್ಬರಕ್ಕೆ ತತ್ತರಿಸಿದ್ದಾರೆ.

Latest article