Monday, November 29, 2021

ತೂಕ ಇಳಿಸೋಕೆ ಅಂತ ಅನ್ನ ಬಿಟ್ರೆ ಅವಾಂತರ ಗ್ಯಾರಂಟಿ..!

Must read

ಸಾಮಾನ್ಯವಾಗಿ ಜನರು ಬೊಜ್ಜು ಹೆಚ್ಚಿಸಲು ಅಕ್ಕಿ ಮೂಲ ಕಾರಣ ಎಂದು ಭಾವಿಸುತ್ತಾರೆ, ಆದ್ದರಿಂದ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಅಕ್ಕಿ ಆಹಾರದ ಸೇವನೆ ಬಿಟ್ಟು ಬಿಡುತ್ತಾರೆ . ಆದರೆ ಅಕ್ಕಿ ನಿಜವಾಗಿಯೂ ಬೊಜ್ಜು ಹೆಚ್ಚಿಸುತ್ತದೆಯೇ ಎನ್ನುವುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ಕೇಳಿ.

ಅಕ್ಕಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಜನರು ಅಕ್ಕಿಯು ಬೊಜ್ಜು ಹೆಚ್ಚಿಸುತ್ತದೆ ಎಂದು ಭಾವಿಸುತ್ತಾರೆ ಆದರೆ ಅಕ್ಕಿ ನಿಜವಾಗಿಯೂ ಬೊಜ್ಜು ಹೆಚ್ಚಿಸುತ್ತದೆಯೇ..? ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಪ್ರಕಾರ, ಅನ್ನವನ್ನು ತಿನ್ನುವುದರಿಂದ ದೇಹದಲ್ಲಿ ಅನೇಕ ಅಗತ್ಯ ಪೋಷಕಾಂಶಗಳ ಕೊರತೆ ನೀಗುತ್ತದೆ .

ಅಕ್ಕಿ ದೇಹವನ್ನು ಒಳಗಿನಿಂದ ಆರೋಗ್ಯಕರವಾಗಿಸುತ್ತದೆ ಅಕ್ಕಿ ಒಂದು ಪ್ರೋಬಯಾಟಿಕ್ ಇದು ನಿಮ್ಮ ಹೊಟ್ಟೆಯನ್ನು ಮಾತ್ರ ತುಂಬುವುದಿಲ್ಲ ಹಾಗೂ ಅನ್ನ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿಡಲು ಕೆಲಸ ಮಾಡುತ್ತದೆ ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಇದನ್ನು ತಿನ್ನುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ ಮತ್ತು ಹಾರ್ಮೋನುಗಳ ಸಮತೋಲನ ಉತ್ತಮಗೊಳ್ಳುತ್ತದೆ.

ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳು ಮತ್ತು ಯುವಕರು ಅನ್ನವನ್ನು ತಿನ್ನಬೇಕು ಅಕ್ಕಿ ಚರ್ಮಕ್ಕೂ ಒಳ್ಳೆಯದು ಇದು ಪ್ರೊಲ್ಯಾಕ್ಟಿನ್ ನಿಂದಾಗಿ ವಿಸ್ತರಿಸಿದ ರಂಧ್ರಗಳನ್ನು ಹೋಗಲಾಡಿಸುತ್ತದೆ. ಅಕ್ಕಿಯನ್ನು ತಿನ್ನುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಹೀಗೆ ದೇಹದ ಆಂತರಿಕ ಮತ್ತು ಬಾಹ್ಯ ಅಂಗಗಳಿಗೂ ಉಪಯುಕ್ತವಾದ ಅಕ್ಕಿಯ ಸೇವನೆ ತ್ಯಜಿಸುವುದು ಎಷ್ಟು ಸೂಕ್ತ ನೀವೆ ಯೋಚಿಸಿ.

Latest article