Thursday, January 27, 2022

ಪ್ರಧಾನ ಅರ್ಚಕ ಸ್ಥಾನಕ್ಕಾಗಿ ಗರ್ಭಗುಡಿಯಲ್ಲೇ ಬಡಿದಾಡಿಕೊಂಡ ಅರ್ಚಕರು

Must read

ಹಾವೇರಿ: ಪ್ರಧಾನ ಅರ್ಚಕ ಸ್ಥಾನಕ್ಕಾಗಿ ಅರ್ಚಕರು ಗರ್ಭಗುಡಿಯಲ್ಲಿ ಬಡಿದಾಡಿಕೊಂಡ ಘಟನೆ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನಡೆದಿದೆ.

ಪೂಜೆ ಮಾಡುವ ಸಂಬಂಧ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್, ದೇವಸ್ಥಾನದ ಪರಿಚಾರಕ ಶಿವಪ್ಪ ಉಪ್ಪಾರ ಹಾಗೂ ಮೃತ್ಯುಂಜಯ ಎಂಬುವವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬೆಳಗಿನ ಜಾವ ದೇವರ ಮೊದಲ ಪೂಜೆಗಾಗಿ ಪ್ರಧಾನ ಅರ್ಚಕ ಸಂತೋಷ ಭಟ್ ಗಂಟೆ ಕೇಳಿದ್ದಾರೆ. ಈ ವೇಳೆ ಗಂಟೆ ಕೊಡದೆ ಮೃತ್ಯುಂಜಯ ಎಂಬುವವರು ದೇವರ ತ್ರಿಶೂಲದಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಈ ವೇಳೆ ದೇಸ್ಥಾನದಲ್ಲಿದ್ದ ಮಹಿಳೆಯರು ತಡೆಯುವ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ರಾಣೆಬೇನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

Latest article