ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿವಿಯಲ್ಲಿ 6 ಮತ್ತು 7 ನೇ ಘಟಕೋತ್ಸವ ನಡೆಯತ್ತಿದ್ದು, ಘಟಕೋತ್ಸವಕ್ಕೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ರಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ನೀಡಲಾಗುತ್ತಿದ್ದು 6ನೇ ಘಟಕೋತ್ಸವದ ಮೂರು ಜನಸಾಧಕರಿಗೆ ಹಾಗೂ 7 ನೇ ಘಟಕೋತ್ಸವದ ಮೂರುಜನ ಸಾಧಕರಿಗೆ ಗೌರವ ಡಾಕ್ಟರೇಟ್ ಕೊಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಆರೇಮಲ್ಲಾಪುರ ಗ್ರಾಮದ ಕೆಂಚಪ್ಪ ಚನ್ನಬಸಪ್ಪ ನಾಗರಜ್ಜಿ, ಉಡುಪಿ ಜಿಲ್ಲೆಯ ಏಳತಾಡು ಕನಕ ನಿವಾಸಿ ತಲ್ಲೂರು ಶಿವರಾಮ್ ಶೆಟ್ಟಿ, ಬಾಗಲಕೋಟಿ ಜಿಲ್ಲೆಯ ನವನಗರದ ವೆಂಕಪ್ಪ ಅಂಬಾಜಿ ಸುಗೇತಕರ್ ಧಾರವಾಡ ಜಿಲ್ಲೆಯ ನವನಗರ ಯಶವಂತ ಸರದೇಶಪಾಂಡೆ ಹಾಗೂ ಗದಗ ಜಿಲ್ಲೆಯ ಗಂಗಿಮಡಿನಗರದ ಬಸವರಾಜ ಮಲರಾಜಪ್ಪ ಕಂಚಿಗೇರಿ ಎಂಬ ಐದು ಜನರಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದು ಇದರ ಜೊತೆಗೆ ವಿವಿಧ ಪದವಿಯಲ್ಲಿ ಸಾಧನೆ ಮಾಡಿದ ಐದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ ಮಾಡಲಾಗುತ್ತದೆ.