Monday, November 29, 2021

ಜೆಡಿಎಸ್​ನವರು ಬಿಜೆಪಿಯಿಂದ ಸೂಟ್​ಕೇಸ್​ ತೆಗೆದುಕೊಂಡು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ: ಜಮೀರ್ ಗಂಭೀರ ಆರೋಪ

Must read

ಹಾನಗಲ್: ಹೆಚ್​ಡಿಕೆಗೆ ಸಿಂದಗಿಯಲ್ಲಿ ಸೂಟ್​ಕೇಸ್ ಸಿಕ್ಕಿದೆ. ಅದಕ್ಕೆ ಅಲ್ಲೆ ಠಿಕಾಣಿ ಹೂಡಿದ್ದಾರೆ. ಇಲ್ಲಿ ಸೂಟ್​ಕೇಸ್ ಸಿಗ್ಲಿಲ್ಲ. ಹೀಗಾಗಿ ಇಲ್ಲಿಂದ ವಾಪಸ್ ಹೋಗಿದ್ದಾರೆ. ಜೆಡಿಎಸ್​ನವರು ಬಿಜೆಪಿಯಿಂದ ಸೂಟ್​ಕೇಸ್​ ತೆಗೆದುಕೊಂಡು ಮುಸ್ಲಿಂ ಅಭ್ಯರ್ಥಿಯನ್ನ ಹಾಕಿದ್ದಾರೆ ಎಂದು ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಗಂಭೀರವಾಗಿ ಆರೋಪಿದ್ದಾರೆ.

ನರೇಗಲ್ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉದಾಸಿಯವರನ್ನ ಬಹಳ‌ ಹತ್ತಿರದಿಂದ ನೋಡಿದ್ದೇನೆ. ಅವರದ್ದು ಜಾತ್ಯತೀತ ನಿಲುವಾಗಿತ್ತು. ಮುಂದೆ ನೂರಕ್ಕೆ ನೂರು ನಮ್ಮ ಸರ್ಕಾರ ಬರುತ್ತೆ. ಈ ಶಾದಿ ಮಹಲ್​ಗೆ ಇನ್ನೆಷ್ಟು ಹಣ ಬೇಕೋ, ಅಷ್ಟು ಕೊಡ್ತೀನಿ. ಜೆಡಿಎಸ್​ನವರು ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಹಾಕಿದ್ದಾರೆ. 2018ರಲ್ಲೂ ಹೀಗೆ ಮಾಡಿದ್ದರು. ಆಗ ಅವರಿಗೆ ಕೇವಲ 1,023 ಮತಗಳು ಬಿದ್ದಿದ್ದವು.

ಸಿಂದಗಿಯಲ್ಲಿ ಬಿಜೆಪಿಯವರೇ ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳುತ್ತಾರೆ. ಜೆಡಿಎಸ್​ನವರು ಸೂಟ್​ಕೇಸ್​ ತೆಗೆದುಕೊಂಡು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ಬಸವಕಲ್ಯಾಣದಲ್ಲೂ 10 ಕೋಟಿ ಹಣ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದರು. ಅವತ್ತೇ ನಾನು ಹೆಚ್​ಡಿಕೆಗೆ ಸವಾಲು ಹಾಕಿದ್ದೆ. ಆದರೆ, ಅವರು ಚರ್ಚೆಗೆ ಬರಲಿಲ್ಲ. ಬಿಜೆಪಿಯವರದ್ದು ಹಿಂದೂ, ಮುಸ್ಲಿಂ ಇದೇ ಆಯಿತು ಎಂದು ಅವಾಚ್ಯ ಶಬ್ಧಗಳಿಂದ ಕಿಡಿಕಾರಿದರು.

Latest article