Monday, November 29, 2021

ಹಾಸನದ ಮಲೆನಾಡು ಭಾಗದಲ್ಲಿ ಮುಂದುವರೆದ ಕಾಡಾನೆಗಳ ಉಪಟಳ..!

Must read

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಹಲವು ಗ್ರಾಮಗಳ ಸಮೀಪವೇ ಕಾಡಾನೆಗಳ ಹಿಂಡು ಆಗಮಿಸುತ್ತಿದ್ದು, ಜನರು ಭಯಭೀರಾಗಿದ್ದಾರೆ.

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ರಸ್ತೆ ಮಧ್ಯೆಯೇ ಒಂಟಿಸಲಗವೊಂದು ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿತ್ತು. ಈ ವೇಳೆ ವಿಡಿಯೋ ಮಾಡಲು ಮುಂದಾದವರನ್ನು ಕಾಡಾನೆ ಅಟ್ಟಾಡಿಸಿದೆ.

ಕಾಡಾನೆಗಳ ಹಾವಳಿಯಿಂದ ಹಾಸನದ ಮಲೆನಾಡು ಭಾಗದ ಜನರು ಹೈರಾಣಾಗಿದ್ದಾರೆ. ಪದೇ ಪದೇ ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು, ಅನೇಕ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

Latest article