Thursday, January 20, 2022

ಪುನೀತ್ ಅಗಲಿ ಇಂದಿಗೆ ಒಂದು ತಿಂಗಳು: ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ, ಅನ್ನದಾನ ಕಾರ್ಯಕ್ರಮ

Must read

ಹಾಸನ: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಹಾಸನದ ಚಿಕ್ಕ ಹೊನ್ನೇನಹಳ್ಳಿ ಗ್ರಾಮಸ್ಥರು ಹಾಗೂ ಅಪ್ಪು ಅಭಿಮಾನಿಗಳು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಇಂದು ಬೆಳಗ್ಗೆಯಿಂದಲೆ ರಕ್ತದಾನ ಆರಂಭವಾಗಿದ್ದು, 30ಕ್ಕೂ ಹೆಚ್ಚು ಯುವಕರು ಅಪ್ಪು ಹೆಸರಿನಲ್ಲಿ ರಕ್ತದಾನ ಮಾಡಿದ್ದಾರೆ. ಅಲ್ಲದೆ 50ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಸ್ಥಳೀಯ ರಸ್ತೆಯೊಂದಕ್ಕೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಲಾಗಿದೆ. ಚಿಕ್ಕ ಹೊನ್ನೇನಹಳ್ಳಿ ಅಪ್ಪು ಅಭಿಮಾನಿಗಳಿಂದ ನೂರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

Latest article