Friday, January 21, 2022

ಎಂಇಎಸ್​ ಹಾಗೂ ಶಿವಸೇನೆ ಬ್ಯಾನ್​ಗೆ ಆಗ್ರಹಿಸಿ ಬೃಹತ್​ ಪ್ರತಿಭಟನೆ

Must read

ಹಾಸನ: ರಾಜ್ಯದಲ್ಲಿ ಎಂಇಎಸ್​ ಹಾಗೂ ಶಿವ ಸೇನೆ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ವಿವಿಧ ಕನ್ನಡಪರ ಸಂಘಟನೆಗಳು ಒಗ್ಗೂಡಿ ಹಾಸನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಸಾಹಿತ್ಯ ಪರಿಷತ್​ನಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾ ನಿರತ ಕಾರ್ಯಕರ್ತರು ಎಂ.ಇ.ಎಸ್. ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ಎರಡು ಸಂಘಟನೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಒತ್ತಾಯ ಹೇರಿರುವ ಕನ್ನಡ ಪರ ಸಂಘಟನೆಗಳು ಬ್ಯಾನ್​ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

Latest article