Monday, November 29, 2021

ಅಕ್ಟೋಬರ್ 28ರಂದು ಬಾಗಿಲು ತೆರೆಯಲಿದೆ ಹಾಸನಾಂಬ ದೇವಾಲಯ

Must read

ಹಾಸನ: ಅಕ್ಟೋಬರ್ 28ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ನಡೆದಿದೆ ಹಾಗೂ ಶಾಲೆಗಳು ಆರಂಭವಾಗಿವೆ. ಏಳು ದಿನಗಳು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶವಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 1 ವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಭಕ್ತರ ಭೇಟಿಗೆ ಅವಕಾಶವಿರಲಿದೆ.

ಭಕ್ತರು ದೇಗುಲಕ್ಕೆ ಬರುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್, ಐಡಿ ಕಾರ್ಡ್ ತರಬೇಕು. ಎರಡು ಲಸಿಕೆ ಪಡೆದವರಿಗೆ ಮಾತ್ರ ಅವಕಾಶವಿರುತ್ತದೆ ಎಂದರು.

 

Latest article