Friday, January 21, 2022

ಕಳಪೆ‌ ಕಾಮಗಾರಿ ನಡೆದ್ರೂ ಒಪ್ಪದೇ ಗುತ್ತಿಗೆದಾರನ ಪರ ಬ್ಯಾಟ್​ ಬೀಸಿದ ಶಾಸಕ ಪ್ರೀತಂ ಗೌಡ..!

Must read

ಹಾಸನ: ಕಳಪೆ ಕಾಮಗಾರಿ ಮಾಡಿ ಜೈ ಎನಿಸಿಹೋಗಿದ್ದ ಗುತ್ತಿಗೆದಾರರ ಕೆಲಸವನ್ನು ಸ್ಥಳೀಯರು ಶಾಸಕರ ಎದುರೆ ಬಟಾಬಯಲು ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಮಹಾವೀರ ಭವನ ರಸ್ತೆ‌ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದರು. ಹೀಗಾಗಿ ಸ್ಥಳೀಯ ನಗರಸಭಾ ಸದಸ್ಯ ಚಂದ್ರೇಗೌಡ ಹಾಗೂ ಶಾಸಕ ಪ್ರೀತಂಗೌಡ ಕಾಮಗಾರಿ ಪರಿಶೀಲನೆಗೆ ಬಂದಿದ್ದರು.

ಈ ವೇಳೆ ಸ್ಥಳೀಯರು ರಸ್ತೆಯನ್ನು ತೋರಿಸಿ ಕಳಪೆ ಕಾಮಗಾರಿಯ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ಶಾಸಕರು ಗುತ್ತಿಗೆದಾರನ ಪರವಾಗಿಯೇ ಮಾತನಾಡಿದ್ದು, ಕಳಪೆ‌ ಕಾಮಗಾರಿ ನಡೆದಿದ್ದರೂ ಒಪ್ಪದ‌ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Latest article