Tuesday, August 16, 2022

ನಾವು ಮೋದಿಯವರ ಮಾತು ಕೇಳಿದ್ರೆ ಕುಮಾರಸ್ವಾಮಿ ಸಿಎಂ ಆಗಿ ಮುಂದುವರಿಯುತ್ತಿದ್ದರು: ಹೆಚ್.ಡಿ.ರೇವಣ್ಣ

Must read

ಹಾಸನ: ನಾವು ಮೋದಿಯವರ ಮಾತು ಕೇಳಿದ್ರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು. ಇದನ್ನು ಮೋದಿ ಹೇಳಿಲ್ವಾ ಕೇಳಿ? ಅವರು ಇಲ್ಲ ಅಂದ್ರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ. ಆದರೆ, ನಾವು ಮೋದಿ ಮಾತು ಕೇಳಲಿಲ್ಲ. ನಾವು ಯಾರ ಮನೆ ಬಾಗಲಿಗೆ ಹೋಗಿ ಕಾಲು ಕಟ್ಟಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್​ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮರಳು ದಂಧೆ ಮಾಡುತ್ತಿದ್ದಾರೆ.
ಒಂದು ಲಾರಿಗೆ ಒಂದು ಒಂದು ಲಕ್ಷ ಹಣ ತೆಗೆದುಕೊಳ್ಳುತ್ತಿದ್ದಾರೆ. ಪರ್ಮೀಟ್ ಕಡಿಮೆ ಕೊಟ್ಟು ಕೆಲವರಿಗೆ ನಾಲ್ಕು ಕೋಟಿ 90 ಲಕ್ಷ ದಂಡ ಹಾಕಿದ್ದಾರೆ. ಒಬ್ಬೊಬ್ಬರಿಗೆ ನಾಲ್ಕು ಕೋಟಿ, ಅದರಂತೆ ನಾಲ್ಕು ಜನರಿಗೆ ಒಟ್ಟು 15 ಕೋಟಿ ರೂ. ದಂಡ ಹಾಕಿದ್ದಾರೆ. ನನ್ನ ತಾಲೂಕಿನಲ್ಲಿ ಒಂದು ಹಿಡಿ ಮರಳು ಸಿಗುತ್ತಿಲ್ಲ. ಮರಳು ದಂಧೆಯ ಪ್ರಾಮಾಣಿಕ ಅಧಿಕಾರಿಯನ್ನು ಮೂಲೆಗೆ ಕೂರಿಸಿದ್ದಾರೆ. ಅರೆಹಳ್ಳಿ ಪೊಲೀಸ್ ಅಧಿಕಾರಿಯನ್ನು ಮೂಲೆ ಗುಂಪು ಮಾಡಿದ್ದಾರೆ.

ಹಾಸನ, ಸಕಲೇಶಪುರ, ಬೇಲೂರು ಪೊಲೀಸ್ ಅಧಿಕಾರಿಗಳು ಕಂಬೈಂಡ್ ಆಗಿ ಹಣವನ್ನು ಲೂಟಿ ಮಾಡಿದ್ದಾರೆ. ನಾನು ಈ ಜಿಲ್ಲೆಗೆ ಬರಬೇಕಾದರೆ ಹಣ ಕೊಟ್ಟು ಬಂದಿದ್ದೇನೆ ಎನ್ನುತ್ತಾರೆ ಕೆಲ ಪೊಲೀಸ್ ಅಧಿಕಾರಿಗಳು. ಹಾಗಾಗಿ ಮರಳು ಲೂಟಿ ಮಾಡಲು ಹೊರಟಿದ್ದಾರೆ. ಸರ್ಕಾರಿ ಕೆಲಸಕ್ಕೆ ಕೊಟ್ಟಿದ್ದಾರಾ, ಹೊಳೆನರಸೀಪುರಕ್ಕೆ ಕೊಟ್ಟಿದ್ದಾರಾ, ದೇವಸ್ಥಾನಕ್ಕೆ ಕೊಟ್ಟಿದ್ದಾರಾ ತನಿಖೆ ಮಾಡಲಿ ಎಂದು ಹಾಸನ ಪೊಲೀಸ್ ಇಲಾಖೆ ಹಾಗೂ ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆ ಮಾಡಲು ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಮಾಡಿಕೊಟ್ಟಿದ್ದಾರೆ. ಸ್ಥಳೀಯ ಅಧಿಕಾರಿಗಳಾದ ವಿಎ, ರವಿನ್ಯೂ ಇನ್ಸಪೆಕ್ಟರ್ ಸೇರಿ ಮಾಡಿದ್ದಾರೆ. 11 ಎಕರೆ ಸರ್ಕಾರದ ಖರಾಬು ಜಾಗ ಅಂತ ತೋರಿಸಿದೆ. ಆದರೆ, ಅಧಿಕಾರಿಗಳು ಇದನ್ನು ಗಣಿಗಾರಿಕೆ ಮಾಡಲು ಅನೂಕೂಲ ಮಾಡಲು ಹೊರಟಿದ್ದಾರೆ. ಎಂಟು ಜನರಿಗೆ ಅವರ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಇನ್ನೇನು ಡಿಸಿ ಕಚೇರಿ ಬಳಿ ಈ ಫೈಲ್ ಬರಲಿದೆ. ಖರಾಬು ಜಾಗವನ್ನು ಹೇಗೆ ಖಾಸಗಿ ಅವರಿಗೆ ಮಾಡಿಕೊಟ್ಟರು. ಕೋರೆ ಇರುವ ಜಾಗವನ್ನು ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

Also read:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ: ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

Latest article