Tuesday, October 26, 2021

ಉಪ್ಪಿಗೆ ರೆಡ್ ಆಕ್ಸೈಡ್ ಬೆರೆಸಿ ನಕಲಿ ಗೊಬ್ಬರ ಮಾರಾಟ: ಆರೋಪಿಗಳು ಅರೆಸ್ಟ್​

Must read

ಹಾಸನ: ಉಪ್ಪಿಗೆ ರೆಡ್ ಆಕ್ಸೈಡ್ ಬೆರೆಸಿ ಗೊಬ್ಬರ ಚೀಲದಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಅರಕಲಗೂಡು ಕೊಣನೂರು ಪೊಲೀಸರು ಬಂಧಿಸಿದ್ದಾರೆ. ಮಂಡ್ಯದ ಕೆ.ಆರ್​​ ನಗರದ ಬಯೋ ಆಗ್ರೋ ಮಾರ್ಕೆಟಿಂಗ್​ನ ಅವಿನಾಶ್ ಹಾಗೂ ಆನಂದ್ ಅಲಿಯಾಸ್​ ಅಪ್ಪು ಬಂಧಿತ ಆರೋಪಿಗಳು.

ಮೈಸೂರಿನ ಗೋಡಾನ್​ವೊಂದರಲ್ಲಿ ತಯಾರಾಗುತ್ತಿದ್ದ ನಕಲಿ ಗೊಬ್ಬರವನ್ನು ಆರೋಪಿಗಳು ಮೈಸೂರು ಕಡೆಯಿಂದ ರಾಮನಾಥಪುರಕ್ಕೆ ಮಾರಾಟ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಪಿಎಸ್​ಐ ಅಜಯ್ ನೇತೃತ್ವದ ಕೊಣನೂರು ಪೊಲೀಸರು ಆರೋಪಿಗಳನ್ನು ಬಂಧಿಸಿ 56 ನಕಲಿ ಗೊಬ್ಬರ ಚೀಲವನ್ನು ವಶಕ್ಕೆ ಪಡೆದಿದ್ದಾರೆ.

ರೈತರು ಕಡಿಮೆ ಬೆಲೆಗೆ ಸಿಗುವ ಗೊಬ್ಬರ ಕೊಳ್ಳುವಾಗ ಎಚ್ಚರ ವಹಿಸುವಂತೆ ಹಾಸನ ಎಸ್​ಪಿ ಶ್ರೀನಿವಾಸ್ ಗೌಡ ಎಚ್ಚರಿಕೆ ನೀಡಿದ್ದಾರೆ.

More articles

Latest article