ಹಾಸನ: ಜಿಲ್ಲೆಯಲ್ಲಿ ಇಬ್ಬರನ್ನು ಕೊಂದು ಹಲವರ ಮೇಲೆ ದಾಳಿ ಮಾಡಿದ್ದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಆಲೂರು ತಾಲೂಕಿನ ಬೆಂಬಳೂರು ಸಮೀಪದಲ್ಲಿ ಎರಡು ದಿನಗಳ ನಿರಂತರ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಕೊನೆಗೂ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಓಡಾಡುತ್ತಾ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಏಪ್ರಿಲ್ ತಿಂಗಳಿನಲ್ಲಿ ಒಂದೇ ದಿನ ಇಬ್ಬರನ್ನು ಬಲಿ ಪಡೆದುಕೊಂಡಿತ್ತು.
ಭೀಮ,ಹರ್ಷ, ಸುಗ್ರೀವ, ಮಹೀಂದ್ರ, ಭೀಮ್, ಅಜೇಯಾ ಸೇರಿ ಎಂಟು ಕಾಡಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಪುಂಡಾನೆ ಸೆರೆಯಿಂದ ಸ್ಥಳೀಯರು ಕೊಂಚ ನಿರಾಳರಾಗಿದ್ದಾರೆ.