ಗದಗ: ಕಾರ ಹುಣ್ಣಿಮೆ ವೇಳೆ ಎತ್ತು ಹಾಯ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಕಿರಣ ಕುಮಾರ್ ನರ್ತಿ ಮೃತ ದುರ್ದೈವಿ.
ಸೂರಣಗಿ ಗ್ರಾಮದಲ್ಲಿ ಅದ್ಧೂರಿಯಾಗಿ ಕಾರ ಹುಣ್ಣುಮೆ ಆಚರಿಸಲಾಗಿತ್ತು. ಈ ವೇಳೆ ರಾಸುಗಳ ಓಡಿಸುವಾಗ ಎತ್ತು ಕಿರಣ್ ಎಂಬಾತನನ್ನು ಹಾಯ್ದು ಹೋಗದೆ. ಡಿಕ್ಕಿಯ ರಬಸಕ್ಕೆ ಕಿರಣ್ ನೆಲಕ್ಕೆ ಬಿದ್ದಿದ್ದು, ಕೂಡಲೇ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಎಚ್ಚರಿಕೆ ನೀಡಿದ್ದರೂ ಸಹ ಕಾರ ಹುಣ್ಣುಮೆ ಸಂಭ್ರಮದಲ್ಲಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು ಎನ್ನಲಾಗಿದೆ