ನವದೆಹಲಿ: ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 2020 ಆವೃತ್ತಿಯನ್ನು ಆಯೋಜಿಸಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಅಧಿಕೃತ ‘ಲೆಟರ್ ಆಫ್ ಇಂಟೆಂಟ್’ ಸ್ವೀಕರಿಸಲಾಗಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸೋಮವಾರ ತಿಳಿಸಿದೆ.
ನಾವು (ಅಧಿಕೃತ) ಪತ್ರವನ್ನು ಸ್ವೀಕರಿಸಿದ್ದೇವೆ. ಈಗ ಭಾರತ ಸರ್ಕಾರದಿಂದ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಇಸಿಬಿ ಪ್ರಧಾನ ಕಾರ್ಯದರ್ಶಿ ಮುಬಾಶ್ಶೀರ್ ಉಸ್ಮಾನಿ ಅವರು ಪ್ರಕಟಣೆ ಉಲ್ಲೇಖಿಸಿದ್ದಾರೆ.
Emirates Cricket Board (ECB) confirms that they have received the official ‘Letter of Intent’ from BCCI to host the 2020 edition of the Indian Premier League (IPL).
— UAE Cricket Official (@EmiratesCricket) July 27, 2020
ಹೊಸದಾಗಿ ಪ್ರಸ್ತಾಪಿಸಲಾದ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 19ರಂದು ಪ್ರಾರಂಭವಾಗಲಿರುವ ಈ ಪಂದ್ಯಾವಳಿಯನ್ನು ಆತಿಥ್ಯ ವಹಿಸುವ ಸಲುವಾಗಿ ಎರಡೂ ಕ್ರಿಕೆಟ್ ಮಂಡಳಿಗಳು ತಮ್ಮ ಆಂತರಿಕ ಕಾರ್ಯಕಾರಿ ಸಮಿತಿಗಳು ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಳಿಸಿ ಚರ್ಚೆಯನ್ನು ಪ್ರಾರಂಭಿಸಿವೆ ಎಂದು ಉಸ್ಮಾನಿ ಅವರು ಹೇಳಿದರು.
ವಿಶ್ವದ ಅತ್ಯಂತ ರೋಮಾಂಚಕಾರಿ, ಜನಪ್ರಿಯ ಹಾಗೂ ಲಾಭದಾಯಕ ಪಂದ್ಯಾವಳಿಯನ್ನು ಹೋಸ್ಟ್ ಮಾಡುವ ಕಾರ್ಯಗಳು ಮತ್ತು ಲಾಜಿಸ್ಟಿಕ್ಸ್ ಮೇಲೆ ಪ್ರಭಾವ ಬೀರುವ ಹಲವು ಅಂಶಗಳಿವೆ ಎಂದು ಅವರು ತಿಳಿಸಿದರು.