Wednesday, May 18, 2022

7 ಭಾಷೆ.. 7 ಜನ ವಿಲನ್ಸ್​​.. ಹೇಗಿರುತ್ತೆ ಉಪ್ಪಿ ರೌಡಿಸಂ..!?

Must read

ಬೆಂಗಳೂರು: ಕಬ್ಜ. ರಿಯಲ್​ ಸ್ಟಾರ್ ಉಪೇಂದ್ರ ಮತ್ತು ಆರ್​. ಚಂದ್ರು ಕ್ರೇಜಿ ಕಾಂಬಿನೇಷನ್​​ನಲ್ಲಿ ಬರ್ತಿರೋ ಸೆಕೆಂಡ್​ ವೆಂಚರ್. ಏಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗ್ತಿರೋ ಪ್ಯಾನ್​ ಇಂಡಿಯನ್​ ಸಿನಿಮಾ. 80 ದಶಕದ ಭೂಗತ ಲೋಕದ ಪರಿಚಯ ಮಾಡಿಸಲಿರೋ ಪಕ್ಕಾ ಮಾಸ್​ ಆ್ಯಕ್ಷನ್​ ಎಂಟ್ರಟ್ರೈನರ್​. ಬಹುಕೋಟಿ ವೆಚ್ಚದಲ್ಲಿ ದೊಡ್ಡ ಕ್ಯಾನ್ವಾಸ್​​ನಲ್ಲಿ ತಯಾರಾಗ್ತಿರೋ ಮೋಸ್ಟ್​​ ಎಕ್ಸ್​​ಪೆಕ್ಟೆಡ್​​ ಮೂವಿ.

ಐ ಲವ್​ ಯು ಸಿನಿಮಾ ಶತದಿನೋತ್ಸವ ಸಂಭ್ರಮದ ವೇದಿಕೆಯಲ್ಲೇ ಈ ಕ್ರೇಜಿ ಪ್ರಾಜೆಕ್ಟ್​​ನ ಆರ್​. ಚಂದ್ರು ಘೋಷಿಸಿದರು. ರಿಯಲ್​ ಸ್ಟಾರ್​​ ಉಪೇಂದ್ರ ಅಂಡರ್​ ವರ್ಲ್ಡ್​​ ಡಾನ್​ ಅವತಾರದಲ್ಲಿ ಲಾಂಗ್​ ಹಿಡ್ದು ನಿಂತಿರೋ ಫಸ್ಟ್​​ ಲುಕ್​ ಪೋಸ್ಟರ್​ ರಿವೀಲ್​ ಮಾಡಿತ್ತು ಚಿತ್ರತಂಡ. ಕನ್ನಡ , ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಬಂಗಾಳಿ ಸೇರಿ 7 ಭಾಷೆಯ ಪೋಸ್ಟರ್​​ಗಳನ್ನ ಬಹಳ ವಿಭಿನ್ನವಾಗಿ ಅನಾವರಣ ಮಾಡಲಾಗಿತ್ತು. ಇದೀಗ ಕಬ್ಜ ಚಿತ್ರದ ಮುಹೂರ್ತ ಮತ್ತು ಸ್ಟಾರ್​ ಕಾಸ್ಟ್​​​​​​ ಬಗ್ಗೆ ಥ್ರಿಲ್ಲಿಂಗ್​ ಅಪ್​ಡೇಟ್ಸ್​ ಸಿಕ್ಕಿದೆ.

ಕಬ್ಜಗಾಗಿ ಉಪೇಂದ್ರ ತನು- ಮನ ಅರ್ಪಿಸ್ತಿದ್ದು, ಒಂದು ವರ್ಷ ಕಾಲ ಬೇರಾವುದೇ ಸಿನಿಮಾ ಒಪ್ಪಿಕೊಳ್ಳದೇ, ಕಬ್ಜ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ.. ಸದ್ಯ ಬುದ್ಧವಂತ-2 ಸಿನಿಮಾ ಶೂಟಿಂಗ್​ ಬಹುತೇಕ ಮುಗಿಸಿರೋ ಉಪ್ಪಿ, ನವೆಂಬರ್​ 15ರಿಂದ ಕಬ್ಜ ಸೆಟ್​​ನಲ್ಲಿ ದರ್ಶನ ಕೊಡಲಿದ್ದಾರೆ.. ನವೆಂಬರ್​ 15ರಿಂದ ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್​ ನಡೆಯಲಿದೆ. ಮುಂದೆ ಮೂರು ಹಂತಗಳಲ್ಲಿ ಮುಂಬೈ, ಕೊಲ್ಕತ್ತಾ, ಚೆನ್ನೈ, ಹೈದ್ರಾಬಾದ್​, ಮಧುರೆ ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ಸಾಗಲಿದೆ.

ಕಬ್ಜ ಚಿತ್ರದಲ್ಲಿ 80ರ ದಶಕದ ಭೂಗತ ಜಗತ್ತಿನ ಡಾನ್​ ಕಥೆ ಹೇಳ್ತಿದ್ದಾರೆ ಆರ್​. ಚಂದ್ರು.. ಬೇರೆ ಭಾಷೆಗಳಿಂದ ಏಳು ಮಂದಿ ಖಳನಟರು ಚಿತ್ರಕ್ಕಾಗಿ ಬರ್ತಾರೆ ಅನ್ನಲಾಗ್ತಿದೆ.

ಕನ್ನಡ ನಟ ಪ್ರಕಾಶ್​ ರೈ, ತೆಲುಗಿನ ಜಗಪತಿ ಬಾಬು, ಬಾಲಿವುಡ್​ನ ನಾನಾ ಪಾಟೇಕರ್, ಜಯ ಪ್ರಕಾಶ್​ ರೆಡ್ಡಿ, ಪ್ರದೀಪ್​ ರಾವತ್​, ತಮಿಳಿನ ಸಮುದ್ರ ಖನಿ, ಮನೋಜ್​ ಬಾಜ್​ಪೆ ಹೀಗೆ ಜನಪ್ರಿಯ ಖಳನಟರನ್ನ ಚಿತ್ರಕ್ಕಾಗಿ ಆಯ್ಕೆ ಮಾಡ್ತಿದೆ ಚಿತ್ರತಂಡ. ಇವರೆಲ್ಲಾ ವಿಲನ್​ಗಳಾಗಿಯೇ ನಟಿಸ್ತಾರಾ..? ಒಂದೇ ಸಿನಿಮಾದಲ್ಲಿ ಎಲ್ಲರೂ ಇರ್ತಾರಾ ಅನ್ನೋದನ್ನ ಕಾದು ನೋಡ್ಬೇಕು. ಒಟ್ನಲ್ಲಿ ಇಂತಹ ಖಡಕ್​ ವಿಲನ್​ಗಳ ಎದುರು ಡಾನ್​ ಉಪ್ಪಿ ಆರ್ಭಟ ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ.

Also read:  ಹೆಚ್ಚುವರಿಯಾಗಿ ಬೇಕಾಗುವ ಅಗತ್ಯ ಔಷಧಗಳನ್ನು ಖರೀದಿಸುವಂತೆ ಸಚಿವರ ಸೂಚನೆ..!

ಚಿತ್ರಕ್ಕಾಗಿ 80 ದಶಕದ ಕಾಲಘಟ್ಟವನ್ನ ಕಟ್ಟಿ ಕೊಡೊ ಚಾಲೆಂಜ್​​ ಚಿತ್ರತಂಡದ ಮುಂದಿದೆ. ಅಂದಿನ ಕಾಲದ ಡಾನ್​ ಪಾತ್ರಕ್ಕಾಗಿ ಉಪೇಂದ್ರ ಸಹ ತಯಾರಿ ನಡೆಸ್ತಿದ್ದಾರೆ. ಅಂದಿನ ಡಾನ್​ಗಳ ಬಗ್ಗೆ ಅಧ್ಯಯನ ನಡೆಸಿ, ದೇಹ ದಂಡಿಸಿ, ಮೀಸೆ, ಗಡ್ಡ ಬಿಟ್ಟು ಪಾತ್ರಕ್ಕಾಗಿ ಸಿದ್ಧವಾಗ್ತಿದ್ದಾರೆ ಉಪೇಂದ್ರ. ನವೆಂಬರ್​ 10ಕ್ಕೆ ಫೋಟೋಶೂಟ್​ ಮಾಡಿ, ಕಬ್ಜ ಡಾನ್​ ಅವತಾರದ ಝಲಕ್​ ಅನ್ನ ತೋರಿಸಲಿದ್ದಾರೆ ಆರ್​. ಚಂದ್ರು.

ಒಂದು ಯೂನಿವರ್ಸಲ್​​ ಸಬ್ಜೆಕ್ಟ್​ ಅನ್ನ ಏಳು ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟು ಗೆಲ್ಲುವ ಸಾಹಸಕ್ಕೆ ಆರ್​. ಚಂದ್ರು- ಉಪೇಂದ್ರ ಜೋಡಿ ಕೈ ಹಾಕಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಮುಂದಿನ ವರ್ಷಾಂತ್ಯಕ್ಕೆ ಉಪೇಂದ್ರ ಬಾಕ್ಸಾಫೀಸ್​ ಕಬ್ಜ ಮಾಡೋಕ್ಕೆ ಬರ್ತಿದ್ದಾರೆ.

Latest article