Tuesday, August 16, 2022

ಹೊಸಕೋಟೆ ಅಖಾಡಕ್ಕೆ ಹೊಸ ಟ್ವಿಸ್ಟ್‌..!

Must read

ಬೆಂಗಳೂರು: ಎಂಟಿಬಿ ನಾಗರಾಜ್‌ ರಾಜೀನಾಮೆಯಿಂದ ತೆರವಾಗಿರೋ ಹೊಸಕೋಟೆ ಅಖಾಡಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಶರತ್‌ ಬಚ್ಚೇಗೌಡ ಅವರಿಗೆ ಜೆಡಿಎಸ್‌ ಬೆಂಬಲ ಘೋಷಿಸಿದೆ.

ಇನ್ನೂ ಇದು ಅಚ್ಚರಿ ಎನಿಸಿದರು ಸತ್ಯ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಸಿಎಂ ಕುಮಾರಸ್ವಾಮಿಯೇ ಈ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಇದರೊಂದಿಗೆ ಹೊಸಕೋಟೆ ರಣಕಣ ಮತ್ತಷ್ಟು ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.

ಬಿಜೆಪಿಯ ಖಡಕ್ ಎಚ್ಚರಿಕೆಗೆ ಕೇರ್‌ ಮಾಡದ ಶರತ್ ಬಚ್ಚೇಗೌಡ, ಹೊಸಕೋಟೆ ಬಳಿಯ ಉಪ್ಪಾರಹಳ್ಳಿ ಕರಗದಮ್ಮ ಪಾರ್ಟಿಹಾಲ್‌ನಲ್ಲಿ ಇಂದು ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಬಳಿಕ ಮತ್ತೊಮ್ಮೆ ಪುನರುಚ್ಚರಿಸಿದ ಶರತ್, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ನಿಶ್ಚಿತ ಎಂದಿದ್ದಾರೆ. ಯಾರು ಏನೇ ಮಾಡಿದರು ಸ್ವಾಭಿಮಾನಿ ಸುಮಲತಾಗೆ ಮಂಡ್ಯ ಜನರು ಗೆಲ್ಲಿಸಲಿಲ್ವಾ..? ಹಾಗೆ ನನ್ನನ್ನು ಮತದಾರರ ಕೈಹಿಡಿತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಬೆಳಿಗ್ಗೆ ಶರತ್ ಹಾಕಿದ್ದ ಆಣೆ, ಪ್ರಮಾಣದ ಸವಾಲಿಗೆ ಪ್ರತಿಸವಾಲ್ ಎಸೆದ ಎಂಟಿಬಿ ನಾಗರಾಜ್‌, ಅಪ್ಪ-ಮಕ್ಕಳು ಇಬ್ಬರೂ ಚರ್ಚೆಗೆ ಬರಲಿ. 40 ವರ್ಷಗಳಲ್ಲಿ ಯಾರು, ಏನು ಮಾಡಿದರೆಂದು ಚರ್ಚೆಯಾಗಲಿ. ನಾನು ಚರ್ಚೆಗೆ ಸಿದ್ಧ ಎಂದು ಪಂಥಾಹ್ವಾನ ಕೊಟ್ಟಿದ್ದರು. ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಅಂತಲೂ ಸ್ಪಷ್ಟಪಡಿಸಿದರು.

ಇತ್ತ, ಎಂಟಿಬಿ ಸವಾಲ್‌ ಸ್ವೀಕರಿಸಿರೋ ಶರತ್ ಬಚ್ಚೇಗೌಡ, ಚರ್ಚೆಗೆ ಸಿದ್ಧ ಎಂದಿದ್ದಾರೆ. ಎಲೆಕ್ಷನ್‌ಗೆ ನಿಲ್ತಿರೋದು ನಾನು. ನನ್ನ ತಂದೆ ಅಲ್ಲ. ಹೀಗಾಗಿ, ನಾನೇ ಚರ್ಚೆಗೆ ಬರ್ತೇನೆ ಎಂದು ಗುಡುಗಿದ್ದಾರೆ.

Latest article