Wednesday, May 18, 2022

'ಹೊರರಾಜ್ಯ ಪ್ರಯಾಣಿಕರಿಂದ ಆತಂಕ ಹೆಚ್ಚಾಗಿ ನಿದ್ರೆ ಬರ್ತಾ ಇಲ್ಲ' – ಸಚಿವ ಡಾ.ಕೆ ಸುಧಾಕರ್

Must read

ಚಿಕ್ಕಬಳ್ಳಾಪುರ: ಹೊರರಾಜ್ಯ ಪ್ರಯಾಣಿಕರಿಂದ ನನಗೆ ಆತಂಕ ಹೆಚ್ಚಾಗಿ ನಿದ್ರೆ ಬರ್ತಾ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮಹಾರಾಷ್ಟ್ರದಿಂದ ರಾಜ್ಯಕ್ಕೆ 250 ಜನರ ಆಗಮನವಾಗಿದೆ. 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿರುವುದು ನನಗೆ ಭಯ ಹೆಚ್ಚಾಗಿ, ನಿದ್ರೆ ಬರುತ್ತಿಲ್ಲ. ಮಹಾರಾಷ್ಟ್ರದಿಂದ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿದ್ದು ದುರದೃಷ್ಟಕರ ಎಂದು ಅವರು ತಮ್ಮ ಆತಂಕವನ್ನು ಹೇಳಿಕೊಂಡಿದ್ದಾರೆ.

ಸದ್ಯ ರಾಜ್ಯ ಸರ್ಕಾರದ ದುಡುಕಿನ ನಿರ್ಧಾರ ಮಾಡಿದೆ. ಸೊಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ ಜಿಲ್ಲೆಗೆ ಕಳುಹಿಸಿದ್ದು ದುರದೃಷ್ಟಕರ. ಸೊಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕದಲ್ಲಿ ನಿದ್ರೆ ಬರ್ತಿಲ್ಲ. ಎಲ್ಲಾ ಜಿಲ್ಲಾಡಳಿತಗಳು ಎಚ್ಚರವಹಿಸಿ ಎಂದು ಸ್ವ-ಸರ್ಕಾರದ ನಿರ್ಧಾರಕ್ಕೆ ಸಚಿವ ಡಾ.ಕೆ ಸುಧಾಕರ್ ಅವರು ಕಂಗಾಲು ಆಗಿದ್ದಾರೆ.

ನಾನು ಈಗಾಗಲೇ ಮಖ್ಯ ಕಾರ್ಯದರ್ಶಿಯವರ ಜೊತೆ ಮಾತಾಡಿದ್ದೀನಿ. ಎರಡು ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬಿಡಬೇಕಾಯಿತು ಎಂದು ಸಮಜಾಯಷಿ ಕೊಟ್ಟರು. ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತೀವಿ ಹಾಗು ಎಲ್ಲರಿಗೂ ಪರೀಕ್ಷೆಯನ್ನು ಮಾಡುತ್ತೀವಿ. ಆಯಾ ಜಿಲ್ಲೆಯ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಜನರಿಗೆ ತಿಳಿಸಿದ್ದಾರೆ.

ಸದ್ಯ ಕರ್ನಾಟಕವು ತನ್ನ ಕೋವಿಡ್​ 19 ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ನಿನ್ನೆ 7,293 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗಿನ ಅತ್ಯಧಿಕ ಏಕದಿನ ಪರೀಕ್ಷೆಯಾಗಿದೆ. ಇಂದಿಗೆ 53 ಪರೀಕ್ಷಾ ಲ್ಯಾಬ್​ಗಳು ಕಾರ್ಯನಿರ್ವಹಿಸುತ್ತಿದ್ದು, ಮೇ ಅಂತ್ಯದ ವೇಳೆಗೆ 60 ಲ್ಯಾಬ್‌ಗಳನ್ನು ಹೊಂದುವ ಗುರಿಯನ್ನು ನಾವು ತಲುಪಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest article