Wednesday, May 18, 2022

ಹೇಳಿಕೆ ಹಿಂಪಡೆದ ಕೇಂದ್ರ ಕಾನೂನು ಸಚಿವ

Must read

ನವದೆಹಲಿ: ಆರ್ಥಿಕ ಕುಸಿತಕ್ಕೆ ಸಂಬಂಧಿಸಿದ್ದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇದೀಗ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.

ಅಕ್ಟೋಬರ್ 2ರಂದು ತೆರೆಕಂಡ ಜೋಕರ್, ವಾರ್ ಮತ್ತು ಸೈರಾ ನರಸಿಂಹ ರೆಡ್ಡಿ ಈ ಮೂರು ಸಿನಿಮಾಗಳು ಒಂದೇ ದಿನ 120 ಕೋಟಿ ಗಳಿಸಿವೆ. ದೇಶದ ಆರ್ಥಿಕತೆ ಉತ್ತಮವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದರು.

ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ ಎಂದು ಹೇಳುವುದಕ್ಕಾಗಿ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ ಅನ್ನು ಉದಾಹರಣೆಯಾಗಿ ನೀಡಿದ ಕೇಂದ್ರ ಸಚಿವರ ಈ ಹೇಳಿಕೆ ಟೀಕೆಗೊಳಗಾಗಿತ್ತು. ನಿನ್ನೆ ಈ ರೀತಿಯ ಹೇಳಿಕೆ ನೀಡಿದ್ದ ರವಿಶಂಕರ್ ಪ್ರಸಾದ್ ತನ್ನ ಹೇಳಿಕೆ ಸಂದರ್ಭೋಚಿತ ಅಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಇಂದು ತಿಳಿಸಿದ್ದಾರೆ.

Latest article